ಸಿಂಧನೂರು: ಜ.11 ಟೌನ್‌ಹಾಲ್‌ನಲ್ಲಿ ರಂಗಾಯಣ ಕಾಲೇಜು ರಂಗೋತ್ಸವದಲ್ಲಿ ಮೂರು ನಾಟಕ ಪ್ರದರ್ಶನ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 10

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಂಗಾಯಣ ಕಲಬುರಗಿ ಹಾಗೂ ಆಕ್ಸ್‌ಫರ್ಡ್ ಸಮೂಹ ಸಂಸ್ಥೆಗಳ ವತಿಯಿಂದ ನಗರದ ಟೌನ್‌ಹಾಲ್‌ನಲ್ಲಿ ಜನವರಿ 10ರಿಂದ 12ರವರೆಗೆ ಹಮ್ಮಿಕೊಂಡಿರುವ ಕಾಲೇಜು ರಂಗೋತ್ಸವ 2024-25ರ ಪ್ರಯುಕ್ತ ಜನವರಿ 11 ರಂದು ಬೆಳಿಗ್ಗೆ 11 ಗಂಟೆಗೆ ಒಂದಾನೊಂದು ಊರು (ನನ್ನ ಕತ್ತೆ ನಿಮ್ಮ ಧರ್ಮ) ನಾಟಕವನ್ನು ಬೀದರ್ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಘೋಡಂಪಳ್ಳಿ ವಿದ್ಯಾರ್ಥಿಗಳು ಅಭಿನಯಿಸುವರು. ಮಧ್ಯಾಹ್ನ 12.30ಕ್ಕೆ ಕರ್ಮ ನಾಟಕವನ್ನು ಕಲಬುರಗಿಯ ಎಂ.ಟೆಂಗಳಿಕರ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. 2.30 ಗಂಟೆಗೆ ಬಾಲಿ ನಾಟಕವನ್ನು ಕೊಪ್ಪಳದ ಸರಕಾರಿ ಪದವಿ ಪೂರ್ವ ಕಾಲೇಜು ಕಿನ್ನಾಳನ ವಿದ್ಯಾರ್ಥಿಗಳು ಪ್ರಸ್ತುತಿಪಡಿಸಲಿದ್ದಾರೆ.


Spread the love

Leave a Reply

Your email address will not be published. Required fields are marked *