ನಮ್ಮ ಸಿಂಧನೂರು, ಜನವರಿ 9
ಅಪಘಾತದಲ್ಲಿ ಲಿಂಗಸುಗೂರು ತಾಲೂಕು ಪ್ರಜಾವಾಣಿ ವರದಿಗಾರ ಬಿ.ಎ.ನಂದಿಕೋಲಮಠ ಅವರು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ, ಸಿಂಧನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸಂತಾಪ ಸಭೆ ನಡೆಸುವ ಮೂಲಕ ನುಡಿನಮ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಿ.ಎಚ್.ಕಂಬಳಿ, ಹಿರಿಯ ಪತ್ರಕರ್ತರಾದ ಪ್ರಹ್ಲಾದ ಗುಡಿ, ಶ್ಯಾಮಕುಮಾರ ಹಾಗೂ ಪತ್ರಕರ್ತರಾದ ಚಂದ್ರಶೇಖರ ಬೆನ್ನೂರು, ಅಶೋಕ ಬೆನ್ನೂರು, ದುರುಗೇಶ, ಶೇಖರ ಯರದಿಹಾಳ, ಅಮರೇಶ ಅಲಬನೂರು, ಚಿದಾನಂದ ದೊರೆ, ಮುಸ್ತಫಾ, ಅಂಬಣ್ಣ ಸಾಸಲಮರಿ ಸೇರಿದಂತೆ ಇನ್ನಿತರರಿದ್ದರು.