ಸಿಂಧನೂರು: ರೆಕಾರ್ಡ್ ರೂಂ ಡಿಜಿಟಲೈಜೇಶನ್‌ಗೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ

Spread the love

ಲೋಕಲ್‌ ನ್ಯೂಸ್:‌ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 8

ಕಂದಾಯ ಇಲಾಖೆಯ ಭೂ ಸುರಕ್ಷಾ ಯೋಜನೆಯಡಿ ರೆಕಾರ್ಡ್ ರೂಂ ಡಿಜಿಟಲೈಜೇಶನ್‌ಗೆ ಶಾಸಕ ಹಂಪನಗೌಡ ಬಾದರ್ಲಿ ಅವರು ಬುಧವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರಿಗೆ ಸಕಾಲಕ್ಕೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರ ಭಾಗವಾಗಿ ಭೂ ಸುರಕ್ಷಾ ಯೋಜನೆಯಡಿ ಅಭಿಲೇಖಾಲಯದ ಗಣಕೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಅರುಣ ದೇಸಾಯಿ ಮಾತನಾಡಿ, ರೇಕಾರ್ಡ್ ರೂಮ್ ಡಿಜಿಟಲೀಕರಣಕ್ಕಾಗಿ ನಮಗೆ 6 ತಿಂಗಳು ಸಮಯಾವಕಾಶ ನೀಡಲಾಗಿದೆ. ಅಲ್ಲದೇ 6 ಜನ ಸಿಬ್ಬಂದಿಯನ್ನೂ ಒದಗಿಸಿದ್ದಾರೆ. ಸಿಂಧನೂರು ತಾಲೂಕು ಒಂದರಲ್ಲೇ ಅಂದಾಜಿ 10 ಲಕ್ಷ 20 ಸಾವಿರಕ್ಕೂ ಹೆಚ್ಚು ಪೇಜ್‌ಗಳನ್ನು ಡಿಜಿಟಲೈಜೇಶನ್ ಮಾಡಬೇಕಿದೆ. 3700 ವಹಿಗಳು (ರೆಜಿಸ್ಟರ್) ಡಿಜಟಲೀಕರಣಗೊಳ್ಳಲಿವೆ. ಮೊದ ಮೊದಲು ಎಲ್ಲಾ ದಾಖಲೆಗಳನ್ನು ಸ್ಕಾö್ಯನ್ ಮಾಡಿ ಕಂಪ್ಯೂಟರ್‌ನಲ್ಲಿ ಅಪ್ಲೋಡಿ ಮಾಡಲಾಗುವುದು. ಈ ಪ್ರಕ್ರಿಯೆ ಮುಗಿದ ನಂತರ ಸಾರ್ವಜನಿಕರಿಗೆ ಅಕ್ಸೆಸ್‌ಬಿಲಿಟಿ ನೀಡಲಾಗುವುದು ಎಂದು ವಿವರಿಸಿದರು.


Spread the love

Leave a Reply

Your email address will not be published. Required fields are marked *