ಸಿಂಧನೂರು: ರಾಯಚೂರಿನ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ 2 ತಿಂಗಳು ಮುಂದೂಡಿಕೆ

Spread the love

ಸುದ್ದಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 02
ರಾಯಚೂರಿನಲ್ಲಿ ಇದೇ ಡಿಸೆಂಬರ್ 14 ಮತ್ತು 15ರಂದು ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಗದಗ ವತಿಯಿಂದ ಆಯೋಜಿಸಲಾಗಿದ್ದ 11ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಕೆಲವು ಅನಿವಾರ್ಯ ಕಾರಣಗಳಿಂದ ಎರಡು ತಿಂಗಳವರೆಗೆ ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಕುರಿತು ದಿನಾಂಕ: 02-12-2024ರಂದು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದಸಾಪ ರಾಜ್ಯ ಘಟಕ ಅಧ್ಯಕ್ಷ ಡಾ. ಅರ್ಜುನ್ ಗೊಳಸಂಗಿ, ದಿಸಾನಿಂ ರಾಜ್ಯ ಘಟಕ ಕಾರ್ಯದರ್ಶಿ ಸುಭಾಸ ಹೊದ್ಲೂರ, ರಾಯಚೂರು ಜಿಲ್ಲಾ ಘಟಕ ಅಧ್ಯಕ್ಷ ತಾಯರಾಜ್ ಮರ್ಚಟ್ಹಾಳ, ಸಿಂಧನೂರು ತಾಲೂಕು ಘಟಕದ ಅಧ್ಯಕ್ಷ ಹುಸೇನಪ್ಪ ಅಮರಾಪುರ, ಮಹಿಳಾ ಘಟಕದ ಧರ್ಮಾವತಿ ಎಸ್.ನಾಯಕ, ದಸಾಪ ಜಿಲ್ಲಾ ಯುವ ಘಟಕದ ಪಾರ್ಥ ಸಿರವಾರ ಅವರು, “ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ ಅಧಿವೇಶನ ಆರಂಭವಾಗುತ್ತಿರುವುದರಿAದ ಸ್ಥಳೀಯ ಹಾಗೂ ಬೇರೆ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಇಲ್ಲಿ ನಡೆಯುವ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದು, ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಸಾಹಿತ್ಯ ಆಸಕ್ತರಿಗೆ ಸಮಸ್ಯೆಯಾಗುತ್ತಿರುವುದು, ದಲಿತ ಬಂಡಾಯ ಸಾಹಿತಿಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಎಲ್.ಹನುಮಂತಯ್ಯ, ಡಾ.ಸರಜು ಕಾಟ್ಕರ್. ಕುಂವೀ, ಡಾ.ಎಚ್.ಟಿ.ಪೋತೆ ಮೊದಲಾದ ಸಾಹಿತಿಗಳು ಭಾಗವಹಿಸಲು ಕಷ್ಟ ಸಾಧ್ಯವಾಗಿರುವುದು, ಸಮ್ಮೇಳನ ಸಂಘಟಿಸಲು ಅನನುಕೂಲ, ಸಮ್ಮೇಳನ ನಿಮಿತ್ತ 30 ಪುಸ್ತಕ ಹಾಗೂ ದಲಿತೋದಯ ಸ್ಮರಣ ಸಂಚಿಕೆ ಪ್ರಕಟಣೆಗೆ ಸಮಯದ ಅಭಾವ” ಸೇರಿದಂತೆ ಹಲವು ಅನಿವಾರ್ಯ ಕಾರ್ಯಗಳಿಂದ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಸಭೆಯ ನಂತರ ದಿನಾಂಕ ನಿರ್ಧಾರ
ಮುಂದಿನ ದಿನಗಳಲ್ಲಿ ಮತ್ತೆ ರಾಜ್ಯ ದಸಾಪ ಕಾರ್ಯಕಾರಿ ಸಮಿತಿ ಹಾಗೂ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸಭೆ ಮಾಡಿ ಮುಂಚಿತವಾಗಿಯೇ ಪತ್ರಿಕಾ ಪ್ರಕಟಣೆಯ ಮೂಲಕ ಎಲ್ಲರಿಗೂ ತಿಳಿಸಲಾಗುವುದು ಎಂದು ಸ್ವಾಗತ ಸಮಿತಿಯ ಅಧ್ಯಕ್ಷರೂ ಹಾಗೂ ಸಚಿವರೂ ಆದ ಎನ್.ಎಸ್.ಭೋಸರಾಜು ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಸಮ್ಮೇಳನ ಸಂಯೋಜಕರಾದ ತಾಯರಾಜ ಮರ್ಚಟ್ಹಾಳ, ಸಹ ಸಂಯೋಜಕ ಹುಸೇನಪ್ಪ ಅಮರಾಪುರ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *