ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 1
ವಿಶ್ವಶಾಂತಿಗಾಗಿ, ಸನ್ನತಿಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ಬಿಕ್ಕು ಹಾಗೂ ಬಿಕ್ಕುಣಿ ಸಂಘ, ಸನ್ನತಿ ಪಂಚಶೀಲ ಪಾದಯಾತ್ರೆ ಸಂಘಟನಾ ಸಮಿತಿ, ರಾಜ್ಯ ಸಮಸ್ತ ದಲಿತ ಸಂಘಟನೆಗಳು, ಎಲ್ಲಾ ಬೌದ್ಧ ಸಂಘ-ಸಂಸ್ಥೆಗಳು ಮತ್ತು ಬುದ್ಧ ವಿಹಾರ ಸಮಿತಿಗಳಿಂದ ದಿನಾಂಕ: 15-11-2024ರಿಂದ ಕಲಬುರಗಿ ಜಿಲ್ಲೆಯ ಬೌದ್ಧರ ಚಾರಿತ್ರಿಕ ಸ್ಥಳ ಸನ್ನತಿಯಿಂದ ಹಮ್ಮಿಕೊಂಡಿರುವ ಸನ್ನತಿ ಪಂಚಶೀಲ ಪಾದಯಾತ್ರೆ ಭಾನುವಾರ ಮಧ್ಯಾಹ್ನ ಸಿಂಧನೂರು ನಗರ ತಲುಪಿತು.
ಭೋಧಿದತ್ತ ಥೇರೋ ಭಂತೇಜಿ ಮತ್ತು ಸಂಗಡಿಗರು ಮಧ್ಯಾಹ್ನ 11 ಗಂಟೆಯ ಸುಮಾರು ತಾಲೂಕಿನ ಮುಳ್ಳೂರು.ಇ.ಜೆ ಗ್ರಾಮದ ಮಾರ್ಗವಾಗಿ ಸಿಂಧನೂರು ನಗರಕ್ಕೆ ಪಾದಯಾತ್ರೆ ಬೆಳೆಸಿದರು. ಅವರೊಂದಿಗೆ ಬೌದ್ಧ ಬಿಕ್ಕುಗಳು, ದಲಿತ ಸಂಘಟನೆಯ ಮುಖಂಡರು ಸೇರಿದಂತೆ ಇನ್ನಿತರರು ಇದ್ದರು.
800 ಕೀ.ಮೀ ಪಾದಯಾತ್ರೆ
ಬೌದ್ಧ ಧರ್ಮೀಯರ ನೆಲೆ ಚಾರಿತ್ರಿಕ ಸನ್ನತಿಯಿಂದ ಆರಂಭವಾಗಿರುವ ಪಂಚಶೀಲ ಪಾದಯಾತ್ರೆಯು ದಿನಾಂಕ: 24-01-2025ರಂದು ಬೆಂಗಳೂರಿಗೆ ತಲುಪಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೇಡಿಕೆಯನ್ನು ಸಲ್ಲಿಸಲಿದೆ.