ಸಿಂಧನೂರು: ನಗರದ ಎಲ್ಲಾ ಚರಂಡಿಗಳ ಹೂಳೆತ್ತಲು ಒತ್ತಾಯಿಸಿ ಪೌರಾಯುಕ್ತರಿಗೆ ಮನವಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 21

ನಗರದ 31 ವಾರ್ಡ್‌ಗಳಲ್ಲಿನ ಬಹಳಷ್ಟು ಚರಂಡಿಗಳು ಹೂಳು, ಕಸ, ತ್ಯಾಜ್ಯ ಹಾಗೂ ಮುಳ್ಳು ಕಂಟಿಗಳಿಂದ ಕೂಡಿದ್ದು, ಕೂಡಲೇ ಹೂಳೆತ್ತಿ, ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮಗೌಡ ಬಣ) ಯ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ರವಾನಿಸಿದರು.

Namma Sindhanuru Click For Breaking & Local News

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಚರಂಡಿ ನೀರು ವಿವಿಧ ವಾರ್ಡ್ಗಳ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ನಿವಾಸಿಗಳು ವಾಸ ಮಾಡಲು ಅಷ್ಟೇ ಅಲ್ಲದೇ ನಾನಾ ಅನಾರೋಗ್ಯ ಸಮಸ್ಯೆ ಎದುರಿಸಿದ್ದಾರೆ. ನಗರದ ಕೆಲವು ಏರಿಯಾದ ಚರಂಡಿಗಳಲ್ಲಿ ನೀರು ಸರಾಗ ಹರಿಯದೇ ರಸ್ತೆ, ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ರಸ್ತೆಗಳು ರಾಡಿಮಯವಾಗುತ್ತಿವೆ. ಅಲ್ಲದೇ ನಗರದ ತಹಸಿಲ್ ಕಾರ್ಯಾಲಯದ ಮುಂಭಾಗದಲ್ಲಿರುವ ಬಸ್ ಶೆಲ್ಟ್ರ್ ಆಜುಬಾಜು ಗಲೀಜು ವಾತಾವರಣ ನಿರ್ಮಾಣವಾಗಿದೆ. ಪ್ರಯಾಣಿಕರು ಕುಳಿತುಕೊಳ್ಳಲು ಮುಜುಗರ ಅನುಭವಿಸುತ್ತಾರೆ. ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಕಾರ್ಯಕರ್ತರು ಪೌರಾಯುಕ್ತರ ಗಮನ ಸೆಳೆದರು.
ನಗರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಿಢೀರ್ ಕ್ರಮ ಕೈಗೊಳ್ಳುವುದರಿಂದ ಅವರ ಕುಟುಂಬಗಳು ಸಮಸ್ಯೆಗೀಡಲಾಗಿವೆ. ಬೀದಿ ವ್ಯಾಪಾರಸ್ಥರು ದೈನಂದಿನ ದುಡಿಮೆಯನ್ನು ಅವಲಂಬಿಸಿದ್ದು, ನಾನಾ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಏಕಾಏಕಿ ಅವರ ಮೇಲೆ ಕ್ರಮ ಕೈಗೊಳ್ಳುವುದರಿಂದ ಸಾಲ ಮರುಪಾವತಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಈ ನಿರ್ಧಾರವನ್ನು ನಗರಸಭೆ ಕೈಬಿಡಬೇಕು ಹಾಗೂ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸುರೇಶ ಗೊಬ್ಬರಕಲ್, ಉಪಾಧ್ಯಕ್ಷ ಹನುಮೇಶ ತಿಪ್ಪನಹಟ್ಟಿ, ನಗರ ಘಟಕದ ಅಧ್ಯಕ್ಷ ದಾವಲ್‌ಸಾಬ್ ದೊಡ್ಡಮನಿ, ಸಂಘಟನೆಯ ಪ್ರಮುಖರಾದ ಶ್ರೀಕಾಂತರೆಡ್ಡಿ, ಮಹಿಬೂಬಸಾಬ, ವಿಘ್ನೇಶ, ರಾಘವೇಂದ್ರ ಹನುಮೇಶ ಗೀತಾಕ್ಯಾಂಪ್, ರವಿಕುಮಾರ್.ಎಚ್. ಇದ್ದರು.


Spread the love

Leave a Reply

Your email address will not be published. Required fields are marked *