ಸಿಂಧನೂರು: ತಾಲೂಕು ಮುಸ್ಲಿಂ ಸಮಾಜ ಸಮಿತಿಯಿಂದ ರಾಷ್ಟ್ರಪತಿಗೆ ಮನವಿ

Spread the love

ನಮ್ಮ ಸಿಂಧನೂರು, ಅಕ್ಟೋಬರ್ 19
ಉತ್ತರ ಪ್ರದೇಶದ ಘಾಜಿಯಾಬಾದ್‌ನ ದೇವಸ್ಥಾನವೊಂದರ ಅರ್ಚಕ ನರಸಿಂಗಾನಂದ ಸರಸ್ವತಿ ಎಂಬುವವರು ಪ್ರವಾದಿ ದ್ವೇಷ ಭಾಷಣ ಮಾಡುವ ಮೂಲಕ ಪ್ರವಾದಿ ಮಹ್ಮದ್ ಅವರ ಬಗ್ಗೆ ಅವಹೇಳನ ಮಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಲು ಮುಂದಾಗಿದ್ದು, ಕೂಡಲೇ ರಾಷ್ಟçಪತಿಗಳು ಅವರ ವಿರುದ್ಧ ಕ್ರಮ ಜರುಗಿಸಿ ಸೌಹಾರ್ದತೆ, ಭ್ರಾತೃತ್ವದ ತತ್ವಗಳನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿ ಸಿಂಧನೂರು ತಾಲೂಕು ಮುಸ್ಲಿಂ ಸಮಿತಿ ವತಿಯಿಂದ ಶನಿವಾರ ಬೆಳಿಗ್ಗೆ ತಹಸೀಲ್ದಾರ್ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ರವಾನಿಸಲಾಯಿತು.
ವಿವಿಧೆತೆಯಲ್ಲಿ ಏಕತೆ ಎನ್ನುವಂತೆ ಭಾರತವು ಜಾತ್ಯಾತೀತ ರಾಷ್ಟçವಾಗಿದ್ದು, ವಿವಿಧ ಧರ್ಮಗಳ, ಮತ-ಪಂಥಗಳ ಜನರು ಸಹಬಾಳ್ವೆ ನಡೆಸುವ ಮೂಲಕ ಬಹುತ್ವದ ಸಂದೇಶ ಸಾರಿದ್ದಾರೆ. ಆದರೆ ನರಸಿಂಹಾನಂದ ಸರಸ್ವತಿ ಅವರು ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿ ಪರಸ್ಪರ ಧರ್ಮ-ಧರ್ಮಗಳ ನಡುವೆ ಕೋಮುವಿಷಜ್ವಾಲೆ ಹೊತ್ತಿಸಲು ಮುಂದಾಗಿದ್ದಾರೆ. ಆ ಮೂಲಕ ದೇಶದ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ನೆಲದ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಸಮಾಜದಲ್ಲಿನ ಅಶಾಂತಿ ವಾತಾವರಣ ಸೃಷ್ಟಿಸಬೇಕೆನ್ನುವ ಕದಡುವ ದುರುದ್ದೇಶದಿಂದ ಮನಬಂದಂತೆ ಮಾತನಾಡಿರುವ ಅವರ ವಿರುದ್ಧ ಕ್ರಮ ಜರುಗಿಸಿ, ಶಾಂತಿ, ನ್ಯಾಯ, ಜಾತ್ಯತೀತತೆ ಹಾಗೂ ದೇಶದ ಭ್ರಾತೃತ್ವದ ಮೂಲ ತತ್ವಗಳನ್ನು ಎತ್ತಿಹಿಡಿದು ಸೌಹಾರ್ದತಾ ವಾತಾವರಣವನ್ನು ಕಾಪಾಡಬೇಕು ಎಂದು
ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮೌಲಾನಾ ರಾಜಾಹುಸೇನ್, ಮೌಲಾನಾ ಗಫೂರ್‌ಸಾಬ್, ನಾಗರಾಜ ಪೂಜಾರ್, ಎಂ.ಡಿ.ನದೀಮುಲ್ಲಾ, ಮೌಲಾನಾ ವಲಿಬಾಷಾ ಮಾತನಾಡಿದರು. ಬಾಬರ್‌ಪಾಷಾ ವಕೀಲ, ಅಬ್ದುಲ್ ಖಾದರ್ ಸುಭಾನಿ, ಖಾಜಿಮಲಿಕ್ ವಕೀಲ, ಜಿಲಾನಿಪಾಷಾ, ಖಾನ್‌ಸಾಬ್, ಹುಸೇನ್‌ಸಾಬ್, ಸೈಲಾನಿಪಾಷಾ, ಜಾಫರ್ ಅಲಿ ಜಾಗೀರದಾರ, ಖಾಜಿ ಜಿಲಾನಿ, ಮೌಲಾನಾ ತಾಜಿಮುದ್ದೀನ್, ಹಾರೂನ್ ಜಾಗೀರದಾರ, ಖಾಜಿ ಜಾವಿದ್, ಮಹ್ಮದ್ ಲಿಯಾಖತ್, ಅಬ್ದಲ್ ಕರೀಂ, ಅಬ್ದುಲ್ ಸಮ್ಮದ್ ಚೌದ್ರಿ, ಮುರ್ತುಜಾ ಹುಸೇನ್, ಇಕ್ಬಾಲ್ ಪಟೇಲ್, ಎಂ.ಡಿ.ಅಸೀಫ್, ಸೇರಿದಂತೆ ಮತ್ತಿತರರು ಇದ್ದರು.


Spread the love

Leave a Reply

Your email address will not be published. Required fields are marked *