ಸಿಂಧನೂರು: ಹಳ್ಳದ ಸೇತುವೆಯ ಬಿರುಕು ದುರಸ್ತಿಗೆ ಒತ್ತಾಯಿಸಿ ಕರವೇ ಮನವಿ

Spread the love

ನಮ್ಮ ಸಿಂಧನೂರು ಸೆಪ್ಟೆಂಬರ್‌ 27
ನಗರದ ರಾಯಚೂರು ಮಾರ್ಗದ ಹೆದ್ದಾರಿಯಲ್ಲಿನ ಹಳ್ಳದ ಸೇತುವೆ (ಎಲ್‌ಐಸಿ ಆಫೀಸ್ ಮುಂದಿನಿಂದ ಯಲ್ಲಮ್ಮ ದೇವಸ್ಥಾನದವರೆಗೆ)ಯ ಕೆಳಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದುರಸ್ತಿ ಕೈಗೊಳ್ಳಬೇಕು ಹಾಗೂ ತಗ್ಗು-ದಿನ್ನೆಗಳಿಂದ ಕೂಡಿದ್ದ ರಸ್ತೆಯನ್ನು ಡಾಂಬರೀಕರಣಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆಯಿಂದ ಶುಕ್ರವಾರ ತಹಸೀಲ್ದಾರ್ ಮೂಲಕ ಕಾರ್ಯನಿರ್ವಾಹಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನುಗುಂದ ಇವರಿಗೆ ಮನವಿಪತ್ರ ರವಾನಿಸಲಾಯಿತು.
150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳ್ಳದ ಸೇತುವೆ ಇದ್ದು ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ ಬೃಹತ್ ಲಾರಿಗಳು, ಸರಕು-ಸಾಗಣೆ ವಾಹನಗಳು ಸೇತುವೆಯನ್ನು ಹಾದುಹೋಗುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸೇತುವೆಯ ಕೆಳಭಾಗದಲ್ಲಿ ೫೦೦ ಮೀಟರ್ ನಷ್ಟ ಜಾಯಿಂಟ್ ಬಿಟ್ಟಿರುವುದರಿಂದ ಭಾರದ ವಾಹನಗಳು ಸಂಚರಿಸಿದಾಗ ದಿನದಿಂದ ದಿನಕ್ಕೆ ಸೇತುವೆಗೆ ಧಕ್ಕೆಯಾಗುವ ಮುನ್ಸೂಚನೆಗಳಿದ್ದು, ಈ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ 17 ಕೋಟಿ ರೂಪಾಯಿ ಹಣದಲ್ಲಿ ಗುಣಮಟ್ಟದ ಸೇತುವೆ ನಿರ್ಮಾಣ ಮಾಡದಬೇಕಾಗಿತ್ತು. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶಾಮೀಲಾಗಿ ಕಳಪೆ ಕಾಮಗಾರಿಗೆ ಕಾರಣರಾಗಿದ್ದಾರೆ ಎಂದು ಸಂಘಟನೆ ಪದಾಧಿಕಾರಿಗಳು ಮನವಿಯಲ್ಲಿ ಆರೋಪಿಸಿದ್ದಾರೆ.
ಈಗಾಗಲೇ ಬಿರುಕುಬಿಟ್ಟ ಕುರಿತು ಸಂಘಟನೆ ವತಿಯಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮೌಖಿಕವಾಗಿ ಗಮನಕ್ಕೆ ತಂದಿದ್ದು ಸರಿಪಡಿಸುವುದಾಗಿ ಹೇಳಿ ಹೋಗಿದ್ದು, ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೇ ಸೇತುವೆಯ ಮೇಲಿನ ತಗ್ಗು -ದಿನ್ನೆ ಹಾಗೂ ಧೂಳಿನಿಂದ ದಿನವೂ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಮನವಿ ಸಲ್ಲಿಸಿದ 15 ದಿನದೊಳಗಾಗಿ ದುರಸ್ತಿಗೆ ಮುಂದಾಗಬೇಕು ಇಲ್ಲದೇ ಹೋದರೆ, ತಹಸೀಲ್ದಾರ್ ಕಾರ್ಯಾಲಯದ ಮುಂದೆ ಧರಣಿ ನಡೆಸುವುದಾಗಿ ಸಂಘಟಕರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್, ಜಿಲ್ಲಾ ಉಪಾಧ್ಯಕ್ಷ ಎಸ್.ದೇವೇಂದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ, ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಮುಖಂಡರಾದ ರಫೀ ಕುನ್ನಟಗಿ, ಶ್ರೀಧರಾಚಾರ್ಯ, ಎಸ್.ಎಸ್.ಪಾಷಾ, ಗುರುರಾಜ ಮುಕ್ಕುಂದಾ, ಬಸವರಾಜ ಗಸ್ತಿ, ಡಾ.ಸೋಮನಾಥ ಸೂಲಂಗಿ, ಕಾಳಪ್ಪ ಮೇಸ್ತ್ರಿ, ಲಿಂಗಪ್ಪ ಜಂಗಮರಹಟ್ಟಿ, ಬಾಷಾಸಾಬ್, ಬಸವರಾಜ ಟೇಲರ್, ರಾಜಾಸಾಬ್ ಗಂಗಾನಗರ, ಶಂಕ್ರಪ್ಪ ವಿರುಪಾಪುರ, ಶರಣಬಸವ ಮಲ್ಲಾಪುರ, ಆರ್.ಎಕ್ಸ್ ಸೂರಿ, ರಂಜಾನಸಾಬ, ಮಹಿಬೂಬ ಕುನ್ನಟಗಿ, ಅಜ್ಮೀರ್‌ಸಾಬ್ ನಾಗಲಾಪುರ, ರವಿ ಬಸಾಪುರ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *