ಸಿಂಧನೂರು: ಗುಂಡಿಗಳ ಮಧ್ಯೆ ಕಳೆದುಹೋದ ವಾರ್ಡ್ ನಂ.14ರ ಭಗೀರಥ, ಕರಿಯಪ್ಪ ಲೇಔಟ್ ರಸ್ತೆ !

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 20

ನಗರದ ಕುಷ್ಟಗಿ ಮಾರ್ಗದ ಮುಖ್ಯ ರಸ್ತೆಯಲ್ಲಿರುವ ಮಹಾಯೋಗಿ ವೇಮನವೃತ್ತದಿಂದ ಕ್ರಾಸ್‌ನಿಂದ ಆಗುವ ವಾರ್ಡ್ ನಂ.14ರ ಒಳರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಭಗೀರಥ ಕಾಲೋನಿ, ಕರಿಯಪ್ಪ ಲೇಔಟ್‌ನ ನಿವಾಸಿಗಳು ದಿನವೂ ಸಂಚಾರಕ್ಕೆ ಯಾತನೆ ಅನುಭವಿಸುತ್ತಿದ್ದಾರೆ.
ವೇಮನ ವೃತ್ತದಿಂದ ಲೇಔಟ್‌ನ ಕೊನೆವರೆಗೂ ಅರ್ಧ ಕಿ.ಮೀ ರಸ್ತೆ ಸಂಪೂರ್ಣ ಅಧ್ವಾನ ಸ್ಥಿತಿಗೆ ತಲುಪಿದ್ದು, ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದಿವೆ. ಈ ಮಾರ್ಗದಲ್ಲಿ ಆಟೊ, ದ್ವಿಚಕ್ರ ವಾಹನ ಚಲಾಯಿಸಲಷ್ಟೇ ಅಲ್ಲ ಕಾಲ್ನಡಿಗೆಯಲ್ಲಿ ಸಾಗಲೂ ಪರಿತಪಿಸಬೇಕಿದೆ. ಮಳೆ ಬಂದರೆ ರಾಡಿಮಯವಾಗುವ ರಸ್ತೆಯಲ್ಲಿ ನಡೆಯಲು ಭಯವಾಗುತ್ತದೆ. ದೈನಂದಿನ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯನ್ನು ಅವಲಂಬಿಸಿದ್ದು, ಎದ್ದು-ಬಿದ್ದು ನಡೆದಾಡುತ್ತೇವೆ. ವೃದ್ಧರು, ವಿಕಲಚೇತನರು ಹಾಗೂ ಚಿಕ್ಕಮಕ್ಕಳ ಈ ರಸ್ತೆಯಲ್ಲಿ ನಡೆದಾಡುವುದು ಕಷ್ಟದಾಯಕವಾಗಿದೆ ಎಂದು ವಾರ್ಡ್ನ ನಿವಾಸಿಗಳು ನೊಂದು ಹೇಳುತ್ತಾರೆ.

Namma Sindhanuru Click For Breaking & Local News

ಧೋಳೋ ಧೂಳು !!
ಕುಷ್ಟಗಿ ಮಾರ್ಗದ ಮುಖ್ಯ ರಸ್ತೆಯಿಂದ ಹಳ್ಳದವರೆಗೂ ಮರಂ ರಸ್ತೆಯಿದ್ದು, ಯಾವುದೇ ವಾಹನ ಸಂಚರಿಸಿದರೂ ಧೂಳು ಮೇಲೇಳುತ್ತದೆ. ಇತ್ತೀಚೆಗೆ ಈ ಮಾರ್ಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ಟಿಪ್ಪರ್, ಟ್ರಾö್ಯಕ್ಟರ್‌ಗಳು ಓಡಾಟದಿಂದ ಸಂಚಾರಕ್ಕೆ ಅನನುಕೂಲವಾಗಿತ್ತು. ಈ ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಟಿಪ್ಪರ್ ಓಡಾಟಕ್ಕೆ ಕಡಿವಾಣ ಹಾಕಿದ್ದಾರೆ. ತಗ್ಗು-ದಿನ್ನೆಯ ರಸ್ತೆಯಲ್ಲಿ ನಡೆದಾಡಲು ಆತಂಕವಾಗುತ್ತದೆ, ಬೇರೆ ದಾರಿಯಿಲ್ಲದೇ ಇದೇ ದಾರಿಯನ್ನು ಅವಲಂಬಿಸಿದ್ದೇವೆ ಎಂದು ಇಲ್ಲಿನ ನಾಗರಿಕರು ಅಳಲುತೋಡಿಕೊಂಡಿದ್ದಾರೆ.

Namma Sindhanuru Click For Breaking & Local News

ಶಾಲಾ ವಾಹನ ಚಲಾಯಿಸಲೂ ಸಂಕಷ್ಟ
“ಕುಷ್ಟಗಿ ಮಾರ್ಗದ ಮುಖ್ಯರಸ್ತೆಯಿಂದ ಹಳ್ಳದವರೆಗೂ ರಸ್ತೆ ಸಂಪೂರ್ಣ ದಿವಾಳಿ ಎದ್ದಿದ್ದು, ಈ ಮಾರ್ಗದಲ್ಲಿ ಶಾಲಾ ವಾಹನ ಚಲಾಯಿಸಲು ಭಯವಾಗುತ್ತದೆ. ಏನಾದರು ಅವಘಡ ಸಂಭವಿಸಿ ಸಮಸ್ಯೆಯಾದರೆ ಹೇಗೆ ಎಂಬ ಆತಂಕ ಕಾಡುತ್ತಿದೆ. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಇಲ್ಲಿನ ನಿವಾಸಿಗಳು ನಗರಸಭೆಗೆ, ಶಾಸಕರಿಗೆ ಹಾಗೂ ನಗರಸಭೆ ಸದಸ್ಯರ ಗಮನಕ್ಕೆ ತಂದಿದ್ದಾರೆಂದು ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ಸಿಸಿ ರಸ್ತೆ ನಿರ್ಮಾಣವಾಗಿಲ್ಲ.” ಎಂದು ವಾಹನ ಚಾಲಕರೊಬ್ಬರು ತಿಳಿಸಿದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *