ಸಿಂಧನೂರು: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಆಗ್ರಹಿಸಿ ಪ್ರತಿಭಟನೆ

Spread the love

ನಮ್ಮ ಸಿಂಧನೂರು, ಆಗಸ್ಟ್ 30
ಕರ್ನಾಟಕ ಲೋಕ ಸೇವಾ ಆಯೋಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆ ಸಂಪೂರ್ಣ ಗೊಂದಲಗಳಿಂದ ಕೂಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಈ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ, ವಿದ್ಯಾರ್ಥಿ-ಯುವಜನ ಹಾಗೂ ದಲಿತ, ರೈತ, ಮಹಿಳಾ, ಕೂಲಿಕಾರ್ಮಿಕ ಜನಪರ ಸಂಘಟನೆಗಳ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಲಾಯಿತು.
ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಎಡವಟ್ಟು !
ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಬಹಳಷ್ಟು ಎಡವಟ್ಟುಗಳಾಗಿವೆ. ಎರಡೂ ಪ್ರಶ್ನೆ ಪತ್ರಿಕೆಗಳಲ್ಲೂ ಹಲವಾರು ತಪ್ಪುಗಳು ನುಸುಳಿವೆ. ಕೆಲವು ಪ್ರಶ್ನೆಗಳು ಮತ್ತು ಉತ್ತರದ ಆಯ್ಕೆಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ತದ್ವಿರುದ್ಧವಾಗಿವೆ. ಇನ್ನೂ ಕೆಲವು ಪ್ರಶ್ನೆಗಳು, ಉತ್ತರದ ಆಯ್ಕೆಗಳು ಅರ್ಥವೇ ಆಗದಂತಿವೆ. ಇಂಗ್ಲಿಷ್‌ನಲ್ಲಿ ತಪ್ಪು ಹೇಳಿಕೆಗಳು ಯಾವುವು ಎಂದು ಕೇಳಿದ್ದರೆ, ಕನ್ನಡದಲ್ಲಿ ಸರಿ ಹೇಳಿಕೆಗಳು ಯಾವುವು ಎಂದು ಕೇಳಲಾಗಿದೆ ಹಾಗೆಯೇ ಇಂಗ್ಲಿಷ್‌ನಲ್ಲಿ ಅತ್ಯಂತ ಭಾರದ ಪಕ್ಷಿಗಳಲ್ಲಿ ಒಂದು ಎಂದು ಹೇಳಿದ್ದರೆ, ಕನ್ನಡಕ್ಕೆ ಅನುವಾದ ಮಾಡುವಾಗ ವೇಗವಾಗಿ ಹಾರಾಡುವ ಪಕ್ಷಿ ಎಂದು ಉಲ್ಲೇಖಿಸಲಾಗಿದೆ. ಹೀಗೆ ಒಟ್ಟಾರೆ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲೀಷ್ ಅನುವಾದದ ಅರ್ಥಗಳನ್ನು ತದ್ವಿರುದ್ಧವಾಗಿ ಇರುವುದು ಬಹಳಷ್ಟು ಜನರನ್ನು ಅನುತ್ತೀರ್ಣ ಮಾಡುವ ಆತಂಕವಿರುವುದರಿAದ ಕೆಪಿಎಸ್‌ಸಿ ಪರಿಕ್ಷೆಗಳನ್ನು ಮರುಪರಿಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಕ್ತವಾದ ಶಿಫಾರಸ್ಸು ಮಾಡಬೇಕೆಂದು ಸಿಎಂ ಅವರನ್ನು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Namma Sindhanuru Click For Breaking & Local News

ಈ ಸಂದರ್ಭದಲ್ಲಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ರಾಜ್ಯ ಘಟಕದ ಸದಸ್ಯ ಎಂ.ಗAಗಾಧರ, ದಲಿತ ವಿದ್ಯಾರ್ಥಿ ಪರಿಷತ್‌ನ ಮೌನೇಶ ಜಾಲವಾಡಗಿ, ಭೀಮ್ ಆರ್ಮಿಯ ಪ್ರವೀಣ ಧುಮುತಿ ಮಾತನಾಡಿದರು. ಹನುಮಂತಪ್ಪ ಗೋಡಿಹಾಳ, ಹೆಚ್.ಆರ್.ಹೊಸಮನಿ, ದುರುಗೇಶ ಕಲ್ಮಂಗಿ, ಮಲ್ಲಪ್ಪ.ಎಸ್.ಗೋನಾಳ, ಹನುಮಂತ ಕಲ್ಮಂಗಿ, ಜಂಬಣ್ಣ ಉಪ್ಪಲದೊಡ್ಡಿ, ದಾವಲಸಾಬ್ ದೊಡ್ಡಮನಿ ಮಹೇಶ, ಯಮನೂರು ಕಟ್ಟಿಮನಿ, ಯರಿಸ್ವಾಮಿ, ಪಂಪಾಪತಿ ಹಂಚಿನಾಳ, ನರಸಪ್ಪ ಅಮರಾಪುರ, ಆಲಂಬಾಷ ಬೂದಿವಾಳ, ಯಮನೂರು ಬಸಾಪೂರ, ಮುದಿಯಪ್ಪ ಹನುಮನಗರ ಕ್ಯಾಂಪ್, ರಂಗಪ್ಪ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *