ನಮ್ಮ ಸಿಂಧನೂರು, ಜುಲೈ 13
ಸಿಂಧನೂರಿನಲ್ಲಿ ಪ್ರಪ್ರಥಮವಾಗಿ ಕಳೆದ 7 ವರ್ಷಗಳ ಹಿಂದೆ ಸನ್ರೈಸ್ ಕಾಲೇಜು ಆರಂಭಗೊಂಡಿದ್ದು, ಈ ಬಾರಿಯ ಕರ್ನಾಟಕ ರಾಜ್ಯ ಡಿ ಫಾರ್ಮಸಿ ಪರೀಕ್ಷೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರತಿಭೆಗಳು ಕಾಲೇಜಿನಿಂದ ಹೊರಬರಲಿ ಎಂದು ನಬಿಸಾಬ್ ವಕೀಲರು ಆಶಯ ವ್ಯಕ್ತಪಡಿಸಿದರು. ನಗರದ ಸನ್ರೈಸ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಅವರು ಮಾತನಾಡಿದರು. 7ನೇ ರ್ಯಾಂಕ್ ವಿಜೇತರಾದ ಆಯೇಷಾ ಬೇಗಂ ತಂದೆ ಖದೀರ್ ಪಾಷಾ, ನಿಖತ್ ತಮಕೀನ್ ತಂದೆ ನಬೀಸಾಬ್ ಅವರು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸಾಧನೆಯ ಕುರಿತು ಸಂಸ್ಥೆಯ ಅಧ್ಯಕ್ಷ ಇರ್ಫಾನ್.ಕೆ, ಪ್ರಾಚಾರ್ಯ ವಾಸೀಂಹುಸೇನ್, ಪ್ಯಾರಾಮೆಡಿಕಲ್ ಪ್ರಾಚಾರ್ಯ ಡಿ.ಚಕ್ರವರ್ತಿ, ನರ್ಸಿಂಗ್ ಪ್ರಾಚಾರ್ಯ ಲಾಜರ್ ಸಿರಿಲ್ ಮಾತನಾಡಿದರು. ಉಪನ್ಯಾಸಕರಾದ ಬಸವಲಿಂಗ, ಆಶುಪಾಶ, ರಾಜೇಶ್, ಜ್ಞಾನೇಶ್ವರಿ ಭವಾನಿ, ಶೋಭಾ, ಸಂತೋಷಿ, ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್, ಇಸಾಕ್, ಮನೋಹರ್ ಬಡಿಗೇರ್ ಮೈಲಾಪುರ, ಪುಟ್ಟರಾಜ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.