ನಮ್ಮ ಸಿಂಧನೂರು, ಜುಲೈ 12
ನಗರದ ಗಂಗಾವತಿ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆಯ ಖಾಲಿ ಜಾಗದಲ್ಲಿ ಹಾಕಿರುವ ಇಂಡಿಯನ್ ಅಮ್ಯೂಸ್ಮೆಂಟ್ ಪಾರ್ಕ್, ಕಾಡು ಪಕ್ಷಿಗಳ ಭವ್ಯ ಲೋಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಾರಕ್ಕೂ ಹೆಚ್ಚು ದಿನಗಳಿಂದ ಭವ್ಯಸಜ್ಜಿಕೆಯನ್ನು ಇಲ್ಲಿ ಹಾಕಿದ್ದು, ಪ್ರಾಣಿಗಳ ಹೋಲಿಕೆಯ ಕೃತಕ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಮನೋರಂಜನೆ ಉಪಕರಣಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ರಸ್ತೆ ಎದುರಿಗೆ ಅರಮನೆಯಂತಹ ಬೃಹತ್ ಕಟೌಟ್ ಹಾಕಿದ್ದು, ದಾರಿಹೋಕರನ್ನು ಗಮನ ಸೆಳೆಯುತ್ತಿದೆ. ಈ ಪಾರ್ಕ್ನಲ್ಲಿ ಜೋಕಾಲಿ, ಮಕ್ಕಳ ಆಟದ ಸಾಮಾನುಗಳು ಸೇರಿದಂತೆ ಸಾರ್ವಜನಿಕರಿಗೆ ಮನರಂಜನೆಯ ಉದ್ದೇಶದಿಂದ ಹಲವು ಸಾಮಗ್ರಿ ಹಾಗೂ ಉಪಕರಣಗಳನ್ನು ಜೋಡಿಸಲಾಗಿದ್ದು, ನಗರದ ಮಕ್ಕಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಸಾಯಂಕಾಲ ಆಗುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಮನೋರಂಜನೆ ಪಡೆಯುತ್ತಿದ್ದಾರೆ. ಶನಿವಾರ ಸಾಯಂಕಾಲ ಹಾಗೂ ಭಾನುವಾರ ಅಮ್ಯೂಸ್ಮೆಂಟ್ ಪಾರ್ಕ್ ಜನದಟ್ಟಣೆಯಿಂದ ಕೂಡಿರುತ್ತದೆ. ಪ್ರತಿದಿನ ಸಾಯಂಕಾಲ 5.30 ಗಂಟೆಯಿಂದ ರಾತ್ರಿ 9.30 ರವರೆಗೆ ಪಾರ್ಕ್ ತೆರೆದಿರುತ್ತದೆ. 3 ವರ್ಷದ ಮೇಲ್ಪಟ್ಟು ಮಕ್ಕಳಿಗೆ ಪ್ರವೇಶ ದರ 50 ರೂಪಾಯಿ ನಿಗದಿಪಡಿಸಲಾಗಿದೆ.