ಸಿಂಧನೂರು: ಮಹಿಳೆ ಸಾವು ಪ್ರಕರಣ, ವೈದ್ಯನ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಆಗ್ರಹ

Spread the love

ನಮ್ಮ ಸಿಂಧನೂರು, ಮೇ 31
ತನ್ನ ಪತ್ನಿ ಯಾಸ್ಮಿನ್ ಅವರ ಸಾವಿಗೆ ನಗರದ ಸ್ಪರ್ಶ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ನಾಗರಾಜ್ ಕಾಟ್ವಾ ಹಾಗೂ ಸಿಬ್ಬಂದಿಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪತಿ ನಿಜಾಮ್ ತುರ್ವಿಹಾಳ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದಿನಾಂಕ: 31-05-2024 ರಂದು ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಸಕಾಲಕ್ಕೆ ವೈದ್ಯರು ಆಸ್ಪತ್ರೆಗೆ ಬರದೇ, ಸರಿಯಾಗಿ ಹೆರಿಗೆ ಮಾಡದೇ ವೈದ್ಯಕೀಯ ನಿರ್ಲಕ್ಷ್ಯದಿಂದ ತನ್ನ ಪತ್ನಿ ಮೃತಪಟ್ಟಿದ್ದಾಳೆಂದು ಆರೋಪಿಸಿ, ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ, ನಿರ್ಲಕ್ಷ್ಯವಹಿಸಿದ ಆಸ್ಪತ್ರೆಯವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Namma Sindhanuru Click For Breaking & Local News

ಸ್ಪರ್ಶ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ತಂಡ
ಮಹಿಳೆ ಸಾವಿನ ಪ್ರಕರಣ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸಿಂಧನೂರು ನಗರದ ಮಹೆಬೂಬಿಯಾ ಕಾಲೋನಿಯಲ್ಲಿರುವ ಸ್ಪರ್ಶ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಮೃತ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ತುರ್ವಿಹಾಳ ಪಟ್ಟಣದ ಕೆಲವರು ವೈದ್ಯರ ತಂಡಕ್ಕೆ ಮನವಿ ಪತ್ರವನ್ನು ನೀಡಿ, ಘಟನೆಯನ್ನು ಸಮಗ್ರವಾಗಿ ವಿವರಿಸಿ, ಕ್ರಮಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ, ಸಾರ್ವಜನಿಕರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *