ಸಿಂಧನೂರು: ದುಡಿಮೆ ಸಂಸ್ಕೃತಿ ಮೇಲೆ ಕಾರ್ಪೋರೇಟ್, ಊಳಿಗೆಮಾನ್ಯ ಸಂಸ್ಕೃತಿಯ ದಾಳಿ: ಡಿ.ಡಿಚ್.ಪೂಜಾರ್

Spread the love

ನಮ್ಮ ಸಿಂಧನೂರು, ಮೇ 31
ದುಡಿಮೆ ಸಂಸ್ಕೃತಿಯ ಮೇಲೆ ಊಳಿಗಮಾನ್ಯ ಮತ್ತು ಕಾರ್ಪೋರೇಟ್ ಬಂಡವಾಳಿಗರ ಸಾಂಸ್ಕೃತಿಕ ದಾಳಿ ತೀವ್ರಗೊಂಡಿದೆ ಎಂದು ಸಿಪಿಐಎಂ ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ ವಿಶ್ಲೇಷಿಸಿದರು.
ಅವರು ನಗರದಲ್ಲಿ ಗುರುವಾರ ಕರ್ನಾಟಕ ರೈತ ಸಂಘ ಹಾಗೂ ಎಐಕೆಕೆಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರಮ ಸಂಸ್ಕೃತಿಯ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಅಪರಾಧಿಗಳಂತೆ ಕಾಣುವುದೇ ಆಳುವ ವರ್ಗದ ಸಂಸ್ಕೃತಿಯಾಗಿದೆ. ಯಾವುದೇ ತಪ್ಪು ಮಾಡದೇ ಅತ್ಯಾಚಾರಕ್ಕೊಳಗಾದ ಮಹಿಳೆ ಸಮಾಜದಲ್ಲಿ ಬದುಕಲು ಸಾದ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವಾದರೆ ತಾನು ವಾಸಿಸುವ ಪ್ರದೇಶದಿಂದ ದೂರವಾಗಿ ಬದುಕಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅತ್ಯಾಚಾರ ಮಾಡಿದ ವ್ಯಕ್ತಿಗಳನ್ನು ಸಮಾಜ ಗರ್ವದಿಂದ ಮೆರೆದಾಡಲು ಮತ್ತು ರಾಜಕೀಯ ಅಧಿಕಾರ ನಡೆಸಲು ಅವಕಾಶ ಕೊಡುತ್ತದೆ. ಹಾಗಾಗಿ ಇಂತಹ ಪರಂಪರೆಯ ಆಳುವ ವರ್ಗದ ಸಂಸ್ಕೃತಿಯನ್ನು ಸಮಾಜದಿಂದ ಕಿತ್ತೊಗೆದು, ಜನಪರ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.

Namma Sindhanuru Click For Breaking & Local News

‘ದೇವರು, ಧರ್ಮದ ಹೆಸರಿನಲ್ಲಿ ಮೌಢ್ಯತೆ ಬಿತ್ತನೆ’
ಆಳುವವರು ತಮ್ಮ ಅಧಿಕಾರ, ಸಂಪತ್ತಿನ ರಕ್ಷಣೆಗಾಗಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಸುಳ್ಳು ಹೇಳಿ ಜನರನ್ನು ಮೌಢ್ಯತೆಯಲ್ಲಿ ಮುಳುಗೇಳಿಸುತ್ತಾರೆ. ಒಂದು ಗ್ರಾಮದ ಬಲಿಷ್ಠ ವರ್ಗ, ದ್ಯಾಮಮ್ಮ, ದುರ್ಗಮ್ಮ ಇತರೆ ಗ್ರಾಮ ದೇವತೆಗಳಿಗೆ ಪ್ರಾಣಿಬಲಿ ಕೊಡದಿದ್ದರೆ ಅಪಾಯ ಇದೆ ಎಂದು ಜನರನ್ನು ನಂಬಿಸುತ್ತದೆ. ಇದರಿಂದ ಆಳುವ ವರ್ಗಕ್ಕೆ ಎರಡು ರೀತಿಯಲ್ಲಿ ಲಾಭವಿದೆ. ಒಂದನೆಯದು ಜನರು ಮೂಢನಂಬಿಕೆಯಿAದ ತಮ್ಮ ನಿಯಂತ್ರಣದಲ್ಲಿರುತ್ತಾರೆ, ಎರಡನೆಯದು ಗ್ರಾಮ ದೇವತೆ ಜಾತ್ರೆ ಮಾಡಿದರೆ ಜನರಲ್ಲಿರುವ ಎಲ್ಲಾ ಹಣ ಆಳುವ ವರ್ಗದವರಿಗೆ ಬರುತ್ತದೆ ಮತ್ತು ಜನರು ಪುನಃ ಸಾಲಗಾರರಾಗುತ್ತಾರೆ ಎಂದು ಡಿ.ಎಚ್.ಪೂಜಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

Namma Sindhanuru Click For Breaking & Local News

‘ಆಳುವ ವರ್ಗದ್ದು ಇತಿಹಾಸದುದ್ದಕ್ಕೂ ಅವೈಜ್ಞಾನಿಕ, ಸುಳ್ಳು ಪರಂಪರೆ’
“ಆಳುವ ವರ್ಗ ಇತಿಹಾಸದ ಉದ್ದಕ್ಕೂ ಅವೈಜ್ಞಾನಿಕ ಹಾದಿಯಲ್ಲಿ ಸಾಗುತ್ತಿರುವುದಲ್ಲದೇ, ಸುಳ್ಳು ಪರಂಪರೆಯನ್ನು ಹೊಂದಿದೆ. ಶಿಕ್ಷಣ, ಕಲೆ, ಸಾಹಿತ್ಯ ಸಂಸ್ಕೃತಿಯ ಮೂಲಕ ಸಮಾಜದ ಶೇ.90ರಷ್ಟು ಜನರನ್ನು ಶೋಷಣೆ ಮಾಡುತ್ತ ಬಂದಿದೆ. ಶ್ರೀರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆಂದು ಜನರನ್ನು ನಂಬಿಸಿ ಮತ್ತು ಇನ್ನೊಂದು ಧರ್ಮದವರ ವಿರುದ್ಧ ದ್ವೇಷವನ್ನು ಬಿತ್ತಿ ದೇಶದಲ್ಲಿ ಹಿಂದುತ್ವದ ಸರ್ವಾಧಿಕಾರ ಮುನ್ನಡೆದಿದೆ” ಎಂದು ಎಂಎಲ್‌ಪಿಐ ರೆಡ್‌ಪ್ಲಾಗ್ ನ ರಾಜ್ಯ ಕಾರ್ಯದರ್ಶಿ ಬಿ.ಬಸವಲಿಂಗಪ್ಪ ಹೇಳಿದರು.

Namma Sindhanuru Click For Breaking & Local News

‘ಶ್ರಮ ಸಂಸ್ಕೃತಿಯ ಮೇಲೆ ಗ್ರಾಹಕ ಸಂಸ್ಕೃತಿ ದಾಳಿ’
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಚಂದ್ರಶೇಖರ ಗೊರಬಾಳ ಮಾತನಾಡಿ, ಮಾರುಕಟ್ಟೆ, ಗ್ರಾಹಕ ಸಂಸ್ಕೃತಿಯ ದಾಳಿಯಿಂದ ಜನರು ಕೂಡಿಬಾಳುವ ಶ್ರಮಸಂಸ್ಕೃತಿ ಸಮಾಜದಿಂದ ನಸಿಸುತ್ತಿದೆ.ಹೊಲ-ಗದ್ದೆಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಸಾಮೂಹಿಕ ದುಡಿಮೆಯಲ್ಲಿ ತೊಡಗುವ ಜನರು ಕೂಡಿಕೊಂಡು ಊಟ ಮಾಡುತ್ತ ಸಾಮರಸ್ಯದಿಂದ ಬದುಕುತ್ತಾರೆ. ಆದರೆ ಜನರನ್ನು ದುಡಿಸಿಕೊಳ್ಳುವ ಮಾಲೀಕರು, ಜಾತಿ ಧರ್ಮದ ಹೆಸರಿನಲ್ಲಿ ಜನರು ಒಂದಾಗದಂತೆ ಕುತಂತ್ರದ ರಾಜಕೀಯ ಮಾಡುತ್ತ, ವ್ಯಾಪಾರೋದ್ಯಮದಲ್ಲಿ ಭಾರಿ ಲಾಭ ಮಾಡಿಕೊಳ್ಳುತ್ತಾರೆ. ದುಡಿಯುವ ಜನರು ಸತ್ಯದ ಸಂಸ್ಕೃತಿನ್ನು ಅನುಸರಿಸಿದರೆ, ಆಳುವವರು ಸುಳ್ಳಿನ ಸಂಸ್ಕೃತಿನ್ನು ಮೈಗೂಡಿಸಿಕೊಂಡು ಜನರನ್ನು ಸುಲಿಗೆ ಮಾಡುತ್ತಾರೆ. ಜನರು ಬಲಿಷ್ಠ ಚಳವಳಿ ಮೂಲಕ ಆಳುವವರನ್ನು ಅಧಿಕಾರದಿಂದ ತೊಲಗಿಸಿ ಶ್ರಮ ಸಂಸ್ಕೃತಿಯನ್ನು ಪುನರ್‌ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು. ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ತಾಲೂಕು ಅಧ್ಯಕ್ಷ ರಮೇಶ ಪಾಟೀಲ್, ಅಖಿಲ ಭಾರತ ಕ್ರಾಂತಿಕಾರಿ ಮಹಿಳೆ ಸಂಘ (ಎಐಆರ್‌ಡಬ್ಲುö್ಯಒ)ದ ರೇಣುಕಾ, ದ್ಯಾಮಮ್ಮ,ಮಲ್ಲೇಶಗೌಡ, ಪಾಮಣ್ಣ ಇತರರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *