(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 30
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಲೋಕೋಪಯೋಗಿ ಇಲಾಖೆಗಳು ಪ್ರಯಾಣಿಕರ, ವಾಹನ ಸವಾರರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿವೆಯೋ ಏನೋ ಗೊತ್ತಿಲ್ಲ ದಿನವೂ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 150(ಎ) ಬೂತಲದಿನ್ನಿ-ಕಲ್ಲೂರು ಮಧ್ಯದ ಪೆಟ್ರೋಲ್ ಬಂಕ್ ಬಳಿಯ ಬ್ರಿಡ್ಜ್ ಗೆ ಕಂದಕ ಬಿದ್ದ ಕಾರಣ ಒಂದು ಬದಿಗೆ ಮುಳ್ಳುಬೇಲಿ ಬಡಿಯಲಾಗಿದೆ.
ಕಳೆದ ಹಲವು ದಿನಗಳ ಹಿಂದೆ ಇಲ್ಲಿನ ಬ್ರಿಡ್ಜ್ ಗೆ ಬೋಂಗಾ (ಕಂದಕ) ಬಿದ್ದಿದ್ದು, ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿದ ಕಾರಣ ದಿನದಿಂದ ದಿನಕ್ಕೆ ಬೋಂಗಾ ದೊಡ್ಡದಾಗುತ್ತಾ ಹೋಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಯಾರೋ ಸಾರ್ವಜನಿಕರು ಕೆಲ ದಿನಗಳ ಹಿಂದೆ ಬೋಂಗಾದಲ್ಲಿ ತೆಂಗಿನ ಪೊರಕೆಯನ್ನು ಇಟ್ಟು ದಾರಿಹೋಕರ ನೆರವಿಗೆ ಬಂದಿದ್ದಾರೆ. ಈ ಅವ್ಯವಸ್ಥೆಯನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಉಸುಕಿನ ಚೀಲ ಹಾಗೂ ಮುನ್ನೆಚ್ಚರಿಕೆ ಫಲಕಗಳನ್ನು ಇಡಲಾಗಿತ್ತು. ದಿನಾಂಕ: ೩೦-೦೫-೨೦೨೪ರಂದು ಕಂದಕದ ಪ್ರಮಾಣ ದೊಡ್ಡದಾಗಿರುವುದರಿಂದ ಅಪಾಯ ಭೀತಿ ಹೆಚ್ಚುತ್ತಿದ್ದಂತೆ, ಹೆದ್ದಾರಿಗೆ ಬೇಲಿ ಬಡಿಯಲಾಗಿದೆ. ಹೀಗಾಗಿ ಬ್ರಿಡ್ಜ್ನ ಒಂದು ಬದಿಯ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.
ಕುರಿತು ‘ನಮ್ಮ ಸಿಂಧನೂರು ವೆಬ್ ನ್ಯೂಸ್ ತಾಣ’ ದಿನಾಂಕ: ೧೨-೦೫-೨೦೨೪ರಂದು “ಬೋಂಗಾ ಬಿದ್ದ ಬ್ರಿಡ್ಜ್ ಕುಸಿಯುವ ಭೀತಿ, ರಾಷ್ಟಿçÃಯ ಹೆದ್ದಾರಿಗೆ ‘ತೆಂಗಿನ ಪೊರಕೆ’ ಆಸರೆ !” ಎಂಬ ಶೀರ್ಷಿಕೆಯಡಿ ಇಲಾಖೆಯವರ ಗಮನ ಸೆಳೆದಿತ್ತು. ತದನಂತರ ಸಂಬAಧಿಸಿದವರು ಉಸುಕಿನ ಚೀಲ, ಮುನ್ನೆಚ್ಚರಿಕೆ ಫಲಕ ಇಟ್ಟು ಕೈತೊಳೆದುಕೊಂಡಿದ್ದನ್ನು ಸ್ಮರಿಸಬಹುದು.
“ಬ್ರಿಡ್ಜ್ ದುರಸ್ತಿ ಯಾವಾಗ ?”
“ಕಲಬುರಗಿ-ಬೆಂಗಳೂರು ಮಾರ್ಗದ ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿಯ ಪರಿಸ್ಥಿತಿಯೇ ಹೀಗಾದರೆ ಹೇಗೆ ? ಬ್ರಿಡ್ಜ್ ದುಸ್ಥಿತಿಯಿಂದಾಗಿ ಸಾರಿಗೆ ಬಸ್ಸುಗಳು, ಬೃಹತ್ ಟ್ಯಾಂಕರ್‌ಗಳು, ಲಾರಿಗಳು ಹಾಗೂ ಸಣ್ಣಪುಟ್ಟ ವಾಹನಗಳ ಸವಾರರಿಗೆ ಆತಂಕ ಎದುರಾಗಿದೆ. ಯಾವುದೇ ರೀತಿಯ ಅವಘಡ ನಡೆದು ಪ್ರಾಣ ಹಾನಿಯಾದ ಹೊಣೆ ಯಾರು ?” ಎಂದು ಪ್ರಯಾಣಿಕರು ಹಾಗೂ ಸಾರ್ವಜನಿಕರು ಪ್ರಶ್ನಿಸುತ್ತಾರೆ. ಕೂಡಲೇ ಸಂಬAಧಿಸಿದವರು ಬ್ರಿಡ್ಜ್ ದುರಸ್ತಿಗೆ ಮುಂದಾಗಬೇಕು ಇಲ್ಲದೇ ಹೋದರೆ ವಿವಿಧ ಸಂಘಟನೆಗಳ ಒಡಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.