ನಮ್ಮ ಸಿಂಧನೂರು, ಮೇ 9
ನಗರದಲ್ಲಿ ಮಧ್ಯಾಹ್ನ 3 ಗಂಟೆ 50 ನಿಮಿಷಕ್ಕೆ ಬಿರುಗಾಳಿ ಸಹಿತ ಬಿರುಸಿನ ಮಳೆ ಆರಂಭವಾಯಿತು. ಮಧ್ಯಾಹ್ನ 2.30ರಿಂದ ಮೋಡ ಕವಿದ ವಾತಾವರಣ ಕಂಡುಬಂತು. ತದನಂತರ 3.50 ನಿಮಿಷಕ್ಕೆ ಮಳೆ ಆರಂಭವಾಯಿತು. ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಬಿಸಿಲ ಧಗೆಗೆ ಜನರು ರೋಸಿ ಹೋಗಿದ್ದಾರೆ. ಬುಧವಾರ ರಾತ್ರಿ 9 ಗಂಟೆ ಸುಮಾರು ಮೋಡ ಕವಿದ ವಾತಾವರಣ ಕಂಡುಬಂದು ಮಳೆ ಸುರಿಯುತ್ತದೆ ಎನ್ನುವ ಆಶಾಭಾವ ಮೂಡಿತ್ತು, ಆದರೆ ಮಳೆ ಬರಲಿಲ್ಲ. ಇವತ್ತು ಬೆಳಿಗ್ಗೆಯಿಂದಲೇ ಸ್ವಲ್ಪ ಮೋಡಗಳು ಕಂಡಬಂದರೂ ಮಧ್ಯಾಹ್ನ ಬಿಸಿಲು ಮುಂದುವರಿದಿತ್ತು, ಈ ನಡುವೆ ಕೆಲವೊತ್ತು ಮಳೆ ಸುರಿತು. “ಎಲ್ಲೆಲ್ಲೋ ಮಳೆ ಆಗುತ್ತೆ ನಮ್ಮ ಕಡೆ ಇಲ್ಲ ನೋಡಿ” ಎಂದು ಜನರು ಪದೇ ಪದೆ ಗುನುಗುತ್ತಿರುವ ನಡುವೆ ಮಧ್ಯಾಹ್ನ ಸುರಿದ ಸಣ್ಣ ಮಳೆ ಒಂದಿಷ್ಟು ತಂಪು ಎರೆಯಿತು. ಈ ನಡುವೆ ರೈತರು ಹಾಗೂ ಸಾರ್ವಜನರಿಕರು ದೊಡ್ಡ ಮಳೆಗಂತೂ ಕಾದು ಕುಳಿತಿದ್ದಾರೆ.