ಸಿಂಧನೂರು : ಒಳಬಳ್ಳಾರಿ ರಸ್ತೆ ಏನಿದು ಅವಸ್ಥೆ ?

Spread the love

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 8

ತಾಲೂಕು ಕೇಂದ್ರದಿಂದ ಅಂದಾಜು 25 ಕಿ.ಮೀ ಅಂತರದಲ್ಲಿರುವ ಒಳಬಳ್ಳಾರಿ ಗ್ರಾಮದ ಸಂಪರ್ಕ ರಸ್ತೆಯಲ್ಲಿನ ಸರಣಿ ತಗ್ಗು-ದಿನ್ನೆಗಳು, ಡಾಂಬರ್ ಕಿತ್ತಿರುವುದು, ಕಂಕರ್ ತೇಲಿರುವುದು, ಪ್ಯಾಚ್ ವರ್ಕ್ ಮಾಡಿರುವುದನ್ನು ನೋಡಿದವರು, ಇಷ್ಟೊಂದು ಬಗೆಯಲ್ಲಿ ರಸ್ತೆ ದುರಸ್ತಿ ಮಾಡಬಹುದೇ ? ಎಂಬ ಉದ್ಘಾರ ತೆಗೆಯುವುದಂತೂ ಗ್ಯಾರಂಟಿ !!

Namma Sindhanuru Click For Breaking & Local News

ಸಿಂಧನೂರು ನಗರದ ಒಳಬಳ್ಳಾರಿ ಕ್ರಾಸ್‌ನಿಂದಲೇ ತಗ್ಗು ದಿನ್ನೆಗಳಿಗೆ ‘ಓಂ ನಾಮ ಹಾಡಲಾಗಿದೆ’. ಇನ್ನೂ ಒಳ ರಸ್ತೆಗಳಲ್ಲಿ ಸಂಚರಿಸಿದರೆ, ಕತೆಯೇ ಮುಗಿಯುತು ? ದಿನವೂ ಹೋಗಿ-ಬಂದು ಜನರಿ ಸಾಮಾನ್ಯವಾಗಿದೆ. ರಸ್ತೆ ಪರಿಸ್ಥಿತಿ ಹೇಳಿದರೂ ಮಾಡಿಸುವವರು ಯಾರು ಎಂದು ಗ್ರಾಮಸ್ಥರು ದೂರುತ್ತಾರೆ. ಈ ಮಾರ್ಗದಲ್ಲಿ ಉದ್ಬಾಳ.ಜೆ,ಗೋಮರ್ಸಿ,ಮಾಡಸಿರವಾರ, ಬೆಳಗುರ್ಕಿ, ಅಲಬನೂರು,ಹರೇಟನೂರು, ಬಾದರ್ಲಿ, ಗಿಣಿವಾರ, ಒಳಬಳ್ಳಾರಿ ಸೇರಿದಂತೆ ಇನ್ನೂ ಒಳ ರಸ್ತೆಗಳ ಮೂಲಕ ಹಲವು ಗ್ರಾಮಗಳಿಗೆ ಸಂಪರ್ಕಿಸಬಹುದಾಗಿದೆ. ಆದರೆ ಸುಸಜ್ಜಿತ, ಗುಣಮಟ್ಟದ ರಸ್ತೆ ಇಲ್ಲದ ಕಾರಣ ಜನರು ದಿನವೂ ಯಾತನೆ ಅನುಭವಿಸುತ್ತಲೇ ಪ್ರಯಾಣಿಸುತ್ತಾರೆ. ಕೆಲವೊಂದು ಗ್ರಾಮಗಳ ಬಳಿ ಒಂದಿಷ್ಟು ಡಾಂಬರ್ ರಸ್ತೆ ಕಂಡುಬಂದರೆ ಮುಂದೆ ಸಾಗಿದಂತೆ ನಾವೇನು ಬಂಡಿ ದಾರಿಯಲ್ಲಿ ಹೋಗುತ್ತಿದ್ದೇವೆಯೇ ಎನ್ನುವ ಅನುಭವವೂ ಉಂಟಾಗುತ್ತದೆ. ಎಲ್ಲೆಂದರಲ್ಲಿ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವುದು ಬೇಡ ಅನಿಸುತ್ತದೆ ಆದರೆ ಬೇರೆ ದಾರಿಯಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

Namma Sindhanuru Click For Breaking & Local News

ಜಾತ್ರೆ ಬಂದಾಗ ‘ಒಳಬಳ್ಳಾರಿ’ ರಸ್ತೆ ನೆನಪಾಗುತ್ತದೆ
“ಈ ಭಾಗದ ಪ್ರಸಿದ್ಧ ಸುಕ್ಷೇತ್ರ ಒಳಬಳ್ಳಾರಿ ಜಾತ್ರೆ ಬಂದಾಗ ಜನಪ್ರತಿನಿಧಿಗಳಿಗೆ ಈ ರಸ್ತೆ ನೆನಪಾಗುತ್ತದೆ. ಆಗ ತಾತ್ಕಾಲಿಕ ಎನ್ನುವಂತೆ ಪ್ಯಾಚ್ ವರ್ಕ್ ಮಾಡಿ, ಜಾತ್ರೆ ಮುಗಿದಿದ್ದೇ ತಡ ಪುನಃ ಹಳೆ ರಸ್ತೆಯ ಅಧ್ವಾನ ಸ್ಥಿತಿಯಲ್ಲೇ ಜನರು ಸಂಚರಿಸುತ್ತಾರೆ. ಮಳೆಗಾಲದಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ಟಂಟಂ ಇಲ್ಲವೇ ದ್ವಿಚಕ್ರ ವಾಹನದಲ್ಲಿ ನಗರಕ್ಕೆ ತಲುಪಲು ಹರಸಾಹಸ ಮಾಡಿದಂತಾಗುತ್ತದೆ. ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದು ಅಪಘಾತಗಳಿಗೆ ಎಡೆಮಾಡಿಕೊಟ್ಟಿದೆ’’ ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಹೇಳುತ್ತಾರೆ.

Namma Sindhanuru Click For Breaking & Local News

ಶಾಸಕರ ಊರಿನ ರಸ್ತೆಯೇ ಅವ್ಯವಸ್ಥೆ ?
“ಹಾಲಿ ಶಾಸಕ ಹಂಪನಗೌಡ ಬಾದರ್ಲಿ ಅವರ ಸ್ವಗ್ರಾಮ ಬಾದರ್ಲಿ ಇದೇ ಮಾರ್ಗದಲ್ಲಿ ಬರುತ್ತದೆ. ಸಿಂಧನೂರು ನಗರದಿಂದ ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ಒಳಬಳ್ಳಾರಿ ಗ್ರಾಮದವರೆಗೆ ಸುಸಜ್ಜಿತ, ಗುಣಮಟ್ಟದ ರಸ್ತೆ ನಿರ್ಮಿಸಲು ಪರಿಣಾಮಕಾರಿ ಕೆಲಸಗಳು ಇಲ್ಲಿಯವರೆಗೂ ಆಗಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಾರಿಗೆ ಸಂಪರ್ಕವೂ ಅಷ್ಟಕಷ್ಟೆ. ಹೀಗಾಗಿ ಜನರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಉತ್ತಮ ರಸ್ತೆಗಳನ್ನು ಕಾಣುವಲ್ಲಿ ನಮ್ಮ ಗ್ರಾಮಗಳು ಹಿಂದುಳಿದಿವೆ. ರಸ್ತೆ ಕೆಲಸವೆಂದರೆ ಕೆಲ ಗುತ್ತಿಗೆದಾರರಿಗೆ ಹಣ ಮಾಡುವ ವ್ಯಾಪಾರವಾಗಿದೆ. ಹಾಗಾಗಿ ರಸ್ತೆ ಕೆಲಸ ಕೈಗೊಂಡ ಕೆಲವೇ ದಿನಗಳಲ್ಲಿ ಮೊದಲಿನಂತಾಗುತ್ತಿವೆ. ನಮ್ಮ ಊರಿನ ರಸ್ತೆಗಳು ಇದಕ್ಕೆ ಹೊರತಾಗಿಲ್ಲ’’ ಎಂದು ಗ್ರಾಮಸ್ಥರು ಹೇಳುತ್ತಾರೆ.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *