ನಮ್ಮ ಸಿಂಧನೂರು, ಮೇ 8
ಕೊಪ್ಪಳ ಲೋಕಸಭೆ ಚುನಾವಣೆ ಮಂಗಳವಾರ ಮುಗಿಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇನ್ನಿತರೆ ಪಕ್ಷದ ಅಭ್ಯರ್ಥಿಗಳು, ಪಕ್ಷೇತರರು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿದ್ದ ಅಭ್ಯರ್ಥಿಗಳು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಉರಿಬಿಸಿಲ ನಡುವೆಯೂ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.69.87 ಮತದಾನವಾಗಿದ್ದು, ರಾಜಕೀಯ ವಲಯದಲ್ಲಿ ಹಲವು ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿವೆ.
ಕಳೆದ ಬಾರಿಗಿಂತ ಈ ಬಾರಿ ಬಿಸಿಲನ ಕಾರಣ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರದ ಭರಾಟೆ ಮಾತ್ರ ಕಂಡುಬರಲಿಲ್ಲ. ಬಿಸಿಲಿಗಂಜಿದ ಬಹುತೇಕ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕಿಳಿದಿದ್ದು ಮಾತ್ರ ಸಂಜೆ ಇಲ್ಲವೇ ಬೆಳಗ್ಗೆಯೇ. ಬಹುತೇಕ ಬಹಿರಂಗ ಸಮಾವೇಶಗಳು ಸಂಜೆ 5 ಇಲ್ಲವೇ 6 ಗಂಟೆಯ ನಂತರ ಸಮಾವೇಶಗೊಂಡಿದ್ದು ಈ ಭಾರಿಯ ವಿಶೇಷವಾಗಿದೆ. ಕಳೆದ ಲೋಕ ಚುನಾವಣೆಯಲ್ಲಿ ಧ್ವನಿ ವರ್ಧಕ, ಬ್ಯಾನರ್, ಬಂಟಿಗ್ಸ್ ಹಾಗೂ ಕರಪತ್ರಗಳ ಹಾವಳಿಯೇ ಇತ್ತು, ಆದರೆ ಈ ಬಾರಿ ಅಷ್ಟೊಂದು ಪ್ರಮಾಣದಲಲಿ ಕಾಣಲಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.