ಸಿಂಧನೂರು : ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ರಾಮತ್ನಾಳ ಗ್ರಾಮ ಲೆಕ್ಕಾಧಿಕಾರಿ ಬರ್ತ್ ಡೇ ಆಚರಣೆ, ಸಾರ್ವಜನಿಕರ ಆಕ್ಷೇಪ

Spread the love

ನಮ್ಮ ಸಿಂಧನೂರು, ಎಪ್ರಿಲ್ 28
ನಗರದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಭಾನುವಾರ ತಾಲೂಕಿನ ರಾಮತ್ನಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಒಬ್ಬರು ಚುನಾವಣಾ ಕರ್ತವ್ಯದ ವೇಳೆಯಲ್ಲಿಯೇ ಜನ್ಮದಿನವನ್ನು ಆಚರಣೆ ಮಾಡಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಜನ್ಮದಿನದಂದು ಪರಸ್ಪರ ಶುಭಾಶಯ ತಿಳಿಸುವುದು, ಕರ್ತವ್ಯ ಸಮಯ ಹೊರತುಪಡಿಸಿ ಖಾಸಗಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಮಾನ್ಯವಾಗಿದೆ. ಆದರೆ, ಕರ್ತವ್ಯದ ವೇಳೆಯಲ್ಲಿ ಬರ್ತ್ ಡೇ ಆಚರಿಸಿದರೆ ಹೇಗೆ, ದಿನವೂ ಒಬ್ಬರಿಲ್ಲ ಒಬ್ಬ ಅಧಿಕಾರಿಗಳ ಜನ್ಮದಿನ ಇದ್ದರೆ ದಿನವೂ ಆಚರಣೆ ಮಾಡಿಕೂಳ್ಳುತ್ತ ಕೂಡಲು ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ತಹಸೀಲ್ದಾರ್ ಅವರ ಸಮ್ಮುಖದಲ್ಲಿಯೇ ಗ್ರಾಮ ಲೆಕ್ಕಾಧಿಕಾರಿ ಬರ್ತ್ ಡೇ ಆಚರಣೆ ಮಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲ ಇಲಾಖೆಯ ಅಧಿಕಾರಿಗಳಿಗೆ ಭಾನುವಾರವೂ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಹಲವು ಮಹತ್ವದ ಜವಾಬ್ದಾರಿ ಹೊಣೆಗಾರಿಕೆಯನ್ನು ನೀಡಲಾಗಿದೆ. ಚುನಾವಣಾ ಕರ್ತವ್ಯದ ವೇಳೆಯಲ್ಲಿಯೇ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *