ನಮ್ಮ ಸಿಂಧನೂರು, ಎಪ್ರಿಲ್ 25
ಕೊಪ್ಪಳ ಲೋಕಸಭಾ ಕ್ಷೇತ್ರದ ಗಂಗಾವತಿಯ ಜೂನಿಯರ್ ಕಾಲೇಜು ಆವರಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಎಪ್ರಿಲ್ 28ರಂದು ದೇಶಪ್ರೇಮಿ ಯುವಜನರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡ್‌ಗಳಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಎಸ್‌ಐಒ ಹಾಗೂ ಡಿವಿಪಿ ಸಂಘಟನೆ ವತಿಯಿಂದ ಗುರುವಾರ ಪ್ರಚಾರಾಂದೋಲನ ನಡೆಸಲಾಯಿತು.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ದಿನದಿಂದ ದಿನಕ್ಕೆ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟಿದ್ದ ಮೋದಿಯವರು ತಮ್ಮ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ವರ್ಷಕ್ಕೆ ೨ ಕೋಟಿ ಇರಲಿ, ಹತ್ತು ವರ್ಷಗಳಲ್ಲಿ ೨ ಕೋಟಿ ಉದ್ಯೋಗ ಸೃಷ್ಟಿಸಿಲ್ಲ. ಕೇಂದ್ರ ಸರ್ಕಾರವು ಅವೈವೈಜ್ಞಾನಿಕ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿರೋಧಿಯಾದ ಎನ್‌ಇಪಿ (ರಾಷ್ಟಿçÃಯ ಶಿಕ್ಷಣ ನೀತಿ) ಜಾರಿಗೆ ತರುವ ಮೂಲಕ ಈ ದೇಶದ ದುಡಿಯುವ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿಸಲು ಹುನ್ನಾರ ನಡೆಸಿದೆ. ಪಠ್ಯವನ್ನು ಕೇಸರೀಕರಣ ಮಾಡಲು ಬಿಜೆಪಿ ವ್ಯವಸ್ಥಿತ ಸಂಚು ರೂಪಿಸುವ ಜೊತೆಗೆ ಮಕ್ಕಳಲ್ಲಿ ಕೋಮು ವಿಷಬೀಜ ಬಿತ್ತಲು ಯತ್ನಿಸುತ್ತಿದೆ. ಹೀಗಾಗಿ ಬಿಜೆಪಿ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಹಾಗೂ ಸಂವಿಧಾನ ವಿರೋಧಿ ನೀತಿಯನ್ನು ಖಂಡಿಸಿ ದೇಶಪ್ರೇಮಿ ವಿದ್ಯಾರ್ಥಿ ಯುವಜನರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಸಂಘಟಕರು ತಿಳಿಸಿದರು. ಪ್ರಚಾರಾಂದೋಲನದಲ್ಲಿ ಕೆವಿಎಸ್‌ನ ಶರಣಕುಮಾರ್, ಚಾಂದ್‌ಪಾಷಾ, ಗೌತಮ್, ಮೌನೇಶ್ ಸೇರಿದಂತೆ ಕೆವಿಎಸ್, ಎಸ್‌ಐಒ ಹಾಗೂ ಡಿವಿಪಿ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಇದ್ದರು.