ಜನಜಾಗೃತಿ ಸಮಾವೇಶದಲ್ಲಿ ಲೇಖಕ ಶಿವಸುಂದರ್ ಅಭಿಪ್ರಾಯ: “ಸರ್ವಾಧಿಕಾರ ಮಣಿಸಲು ಜನ ಚಳವಳಿಯೇ ಮದ್ದು”

Spread the love

ನಮ್ಮ ಸಿಂಧನೂರು, ಎಪ್ರಿಲ್ 22
ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ವೇಮರ್ ಗಣರಾಜ್ಯವನ್ನೇ ರದ್ದುಮಾಡುವ ಮೂಲಕ ಹತ್ತು ಹಲವು ಅನಾಹುತಗಳಿಗೆ ಸರ್ವಾಧಿಕಾರಿ ಹಿಟ್ಲರ್ ಕಾರಣವಾಗಿದ್ದ. ಅಂತದ್ದೇ ಕಳವಳಕಾರಿ ಸ್ಥಿತಿಯನ್ನು ಭಾರತ ಇಂದು ಎದುರಿಸುತ್ತಿದೆ. ದೇಶದ ಜನರ ಭಾವನೆಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರಧಾನಿ ಮೋದಿಯವರು ಹಾಗೂ ಬಿಜೆಪಿ, ಜನರ ಮೇಲೆಯೇ ಯುದ್ಧ ಸಾರಿದ್ದಾರೆ. ಹೀಗಾಗಿ 2024ರ ಚುನಾವಣೆ, ದೇಶವನ್ನು ಹಾಗೂ ಜನರ ಸೌಹಾರ್ದ ಸಂಸ್ಕೃತಿಯನ್ನು ಉಳಿಸಿಕೊಳ್ಳುವಂತಹ ಯುದ್ಧ ಆಗಿದೆ ಎಂದು ಲೇಖಕ ಶಿವಸುಂದರ್ ಅಭಿಪ್ರಾಯಪಟ್ಟರು.

Namma Sindhanuru Click For Breaking & Local News

ಅವರು ನಗರದ ಕೋಟೆ ಈರಣ್ಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ “ಸಂವಿಧಾನ ಮತ್ತು ಪ್ರಜಾತಂತ್ರ ಉಳಿವಿಗಾಗಿ ಬಿಜೆಪಿ ಪಕ್ಷವನ್ನು ಸೋಲಿಸಿ” ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜಸ್ಥಾನದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ದೇಶದ ಪ್ರಧಾನಿಯವರು, ತಾವು ಪ್ರಧಾನಿ ಸ್ಥಾನದಲ್ಲಿದ್ದೇನೆ ಎನ್ನುವುದನ್ನೇ ಮರೆತು ಅತ್ಯಂತ ಕೀಳು ಅಭಿರುಚಿಯ ಭಾಷಣ ಮಾಡುವ ಮೂಲಕ ದೇಶದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಇಂತದ್ದೊಂದು ಘಟನೆ 1950ರ ನಂತರದ ಭಾರತದ ಚುನಾವಣಾ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ದೇಶದ ಸಂವಿಧಾನಕ್ಕೆ ಹಾಗೂ ಸಾಮಾಜಿಕ ಹಂದರಕ್ಕೆ ಬಿಜೆಪಿ ಸಾವಿರಾರು ಬಾರಿ ಚೂರಿ ಇರಿದಿದೆ. ದೇಶದ ಸಂಪತ್ತನ್ನು ಅದಾನಿ, ಅಂಬಾನಿ ಹಾಗೂ ಮಿತ್ತಲ್‌ಗಳಂತಹ ಕೆಲವೇ ಕೆಲವು ಮಾಲೀಕರಿಗೆ ಮಾರಾಟ ಮಾಡಿದೆ. ನಿರ್ಮಲಾ ಸೀತಾರಾಮನ್ ಅವರ ಕೊನೆ ಬಜೆಟ್ ಭಾಷಣದಲ್ಲಿ ಈ ದೇಶದ ಉದ್ಯಮಿಗಳು ಉತ್ಪಾದನೆ ಮಾಡಲು ಅತ್ಯಗತ್ಯವಾಗಿರುವ ಭೂಮಿ, ಬಂಡವಾಳ ಮತ್ತು ಕಾರ್ಮಿಕರು, ಈ ಮೂರು ವಿಷಯಗಳಲ್ಲಿ ಸಂಪೂರ್ಣವಾಗಿ ಉದ್ಯಮಿಗಳ ಪರವಾಗಿ ಕಾಯ್ದೆಗಳನ್ನು ಮಾಡಲು ಆದ್ಯತೆ ನೀಡುವುದಾಗಿ ಹೇಳಿರುವುದು ಬಿಜೆಪಿಯ ಜನವಿರೋಧಿ ನೀತಿಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಆಪಾದಿಸಿದರು.

Namma Sindhanuru Click For Breaking & Local News

ಬಾಂಡ್ ಭ್ರಷ್ಟಾಚಾರ
ಭಾರತೀಯ ಜನತಾ ಪಕ್ಷ ಮೊದಲಿಗೆ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರವನ್ನು ಸಂಪೂರ್ಣ ಇಲ್ಲವಾಗಿಸುತ್ತೇನೆಂದು ಎಂದು ಭರವಸೆ ನೀಡಿತ್ತು. ಆದೆ ಎಲೆಕ್ಟ್ರೋಲ್ ಬಾಂಡ್ ಹೆಸರಿನಲ್ಲಿ 16,300 ಕೋಟಿ ರೂಪಾಯಿಗಳನ್ನು ಕಾರ್ಪೊರೇಟ್ ಕಂಪನಿಗಳು ವಿವಿಧ ಪಕ್ಷಗಳಿಗೆ ದೇಣಿಗೆ ನೀಡಿದ್ದು, ಅದರಲ್ಲಿ 8,300 ಕೋಟಿ ರೂಪಾಯಿ ಬಿಜೆಪಿಗೆ ಹೋಗಿದೆ. ಬಾಂಡ್ ಖರೀದಿಸಿ ಬಿಜೆಪಿಗೆ ನೂರಾರು ಕೋಟಿ ರೂಪಾಯಿ ಕೊಟ್ಟವರು ಪರೋಕ್ಷವಾಗಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಸರ್ಕಾರದ ಕೆಲಸಗಳ ಗುತ್ತಿಗೆದಾರಿಕೆಯನ್ನು ಪಡೆದುಕೊಂಡಿದ್ದಾರೆ. ಇದು ಜನರ ತೆರಿಗೆ ಹಣಕ್ಕೆ ಮಾಡಿದ ಮೋಸವಲ್ಲವೇ ? ಇಡಿ, ಐಟಿ ಹಾಗೂ ಸಿಬಿಐ ಸೇರಿದಂತೆ ಸರ್ಕಾರದ ಯಂತ್ರಾಂಗವನ್ನೇ ಬಳಸಿಕೊಂಡು ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನೇ ಶಾಸನಬದ್ಧಗೊಳಿಸಿದೆ. ರಾಷ್ಟ್ರೀಯ ಮಟ್ಟದ ಮಾಧ್ಯಮವೊಂದು ಅಧ್ಯಯನ ನಡೆಸಿದಂತೆ ಅನ್ಯ ಪಕ್ಷದಿಂದ 23ಜನ ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ನಂತರ ಅವರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಅವರ ವಿರುದ್ಧ ಇಡಿ ತನಿಖೆಯೂ ಇಲ್ಲ, ಸಿಬಿಐ ತನಿಖೆ ಇಲ್ಲ ಎಂದು ಆಪಾದಿಸಿದರು.
ಒಂದೇ ವರ್ಷದಲ್ಲಿ 1 ಲಕ್ಷ 67 ಲಕ್ಷ ನಿರುದ್ಯೋಗಿಗಳ ಸಾವು
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕಳೆದ ವರ್ಷ 1 ಲಕ್ಷ 67 ಸಾವಿರ ಜನ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.60 ಜನ ದಿನಗೂಲಿಗಳು, ನಿರುದ್ಯೋಗಿ ಯುವಕರು. ಇಸ್ರೇಲ್, ರಷ್ಯಾದ ಯುದ್ಧಭೂಮಿಯಲ್ಲಿ ಕೆಲಸ ಮಾಡಲು ಭಾರತೀಯ ಜನರನ್ನು ರಫ್ತು ಮಾಡಲಾಗುತ್ತಿದೆ. ಹೀಗೆ ದೇಶದಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿದ್ದರೂ ಆ ಬಗ್ಗೆ ಕಿಂಚಿತ್ತೂ ಕಾಳಜಿವಹಿಸದೇ ಸದಾ ಹಿಂದೂ-ಮುಸ್ಲಿಂ ಎಂದು ಝಪಿಸುವ ಮೂಲಕ ಸೌಹಾರ್ದದ ಹಂದರಕ್ಕೆ ಬೆಂಕಿ ಬಿಜೆಪಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇಂತಹ ದುರ್ದಿನಗಳಲ್ಲಿ ಚಳವಳಿ ಮತ್ತು ಜನರ ಅರಿವು ಮಾತ್ರ ದೇಶವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

Namma Sindhanuru Click For Breaking & Local News

ಜಾಗತೀಕರಣ, ಕೋಮುವಾದದ ಹುನ್ನಾರಗಳನ್ನು ಬಯಲುಗೊಳಿಸಬೇಕಿದೆ
ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ಪ್ರಭುತ್ವದ ಅಂಗಸAಸ್ಥೆಗಳು ಕೋಮುವಾದೀಕರಣಗೊಂಡಿವೆ. ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಮಿತಿ ಮೀರಿದೆ. ಭ್ರಷ್ಟಾಚಾರ, ಕಾರ್ಮಿಕ ವಿರೋಧಿ ನೀತಿ, ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಗಳು ದೇಶದ ಜನಸಾಮಾನ್ಯರನ್ನು ಪ್ರಪಾತಕ್ಕೆ ತಳ್ಳಿವೆ. ಸಂಘ ಪರಿವಾರ ಮತ್ತು ಬಿಜೆಪಿ ಎನ್ನುವುದು ದೇಶದ ಜನರಿಗೆ ಕಂಟಕವಾಗಿರುವುದರಿಂದ ಜನ ಚಳವಳಿಯೇ ಅದನ್ನು ಹಿಂದೆ ಸರಿಸಬೇಕಿದೆ. ಈ ನಡುವೆ ಜಾಗತೀಕರಣ ಹಾಗೂ ಕೋಮುವಾದದ ಹುನ್ನಾರಗಳನ್ನು ಬಹಿರಂಗೊಳಿಸುವ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮರುಸ್ಥಾಪಿಸಲು ಜನತೆ ಒಗ್ಗೂಡಿ ಹೋರಾಡಬೇಕಿದೆ ಎಂದು ಹೇಳಿದರು.

Namma Sindhanuru Click For Breaking & Local News

ಮಹಾಗುರುವೇ ಸುಳ್ಳುಗಾರ !
ಚಿಂತಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಬಿಜೆಪಿ ಪಕ್ಷ ಭಾವನಾತ್ಮಕ ವಿಚಾರಗಳನ್ನು ಜನರ ತಲೆಯಲ್ಲಿ ತುಂಬಿ ಬೆಳೆ ಬೆಳೆಯಲು ಹೊರಟಿದೆ. ಬಿಜೆಪಿ ಸುಳ್ಳುಗಾರರ ಪಕ್ಷ. ಅದರ ಗುರುವೇ ಮಹಾ ಸುಳ್ಳುಗಾರನಾಗಿದ್ದು, ಅವರ ಶಿಷ್ಯರು ಇನ್ನೆಷ್ಟು ಸುಳ್ಳುಗಾರರು ಇದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಫೆಡರಲ್ ಮೌಲ್ಯಗಳನ್ನು ಧೂಳಿಪಟ ಮಾಡಿ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ ಮತ್ತು ಆರ್ಥಿಕ ದಬ್ಬಾಳಿಕೆ ನಡೆಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತಕ್ಕಪಾಠ ಕಲಿಸಬೇಕಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಕೆಪಿಆರ್‌ಎಸ್‌ನ ಬಸವಂತರಾಯ, ಬಸವಪರ ಸಂಘಟನೆಯ ರುದ್ರಪ್ಪ ಪಗಡದಿನ್ನಿ, ಜಮಾಅತೆ ಇಸ್ಲಾಮಿ ಹಿಂದ್‌ನ ಹುಸೇನ್‌ಸಾಬ್, ಡಿ.ಎಚ್.ಕಂಬಳಿ, ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್ ಸೇರಿದಂತೆ ಇನ್ನಿತರರಿದ್ದರು. ದೇವೇಂದ್ರಗೌಡ ಕಾರ್ಯಕ್ರಮ ನಿರ್ವಹಿಸಿದರು. ಬಸವರಾಜ ಬಾದರ್ಲಿ, ಬಸವರಾಜ ಏಕ್ಕಿ, ಬಿ.ಎನ್.ಯರದಿಹಾಳ, ಶಿವಪುತ್ರ ತುರ್ವಿಹಾಳ ಕ್ರಾಂತಿಗೀತೆಗಳನ್ನು ಹಾಡಿದರು.

Namma Sindhanuru Click For Breaking & Local News

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *