ನಮ್ಮ ಸಿಂಧನೂರು, ಏಪ್ರಿಲ್ 11
ನಗರದ ನಗರದ ಎ.ವಿ.ಎಸ್.ಬ್ರಿಲಿಯಂಟ್ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್‌ಗೆ ೨೦೨೪ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.೯೮.೨೯ ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ೮೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ೯೭ ವಿದ್ಯಾರ್ಥಿಗಳು ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲಿ ೩೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಹಾಗೂ ೬೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಶಾಲಾ ಆಡಳಿತ ಪ್ರಕಟಣೆ ತಿಳಿಸಿದೆ.
ವಿಜ್ಞಾನ ವಿಭಾಗದಲ್ಲಿ ಸಹನಾ ೫೮೫ (೯೭.೫%), ರಮೇಶ ೫೭೮ (೯೬.೩%), ಎಂ.ನಂದಿನಿ ೫೭೭ (೯೬.೨%), ಶರಣಮ್ಮ ೫೭೭ (೯೬.೨%), ಮುತ್ತಣ್ಣ ೫೭೩ (೯೫.೫%), ನಿಂಗಪ್ಪ ೫೭೩ (೯೫.೫%), ಲಂಕೇಶ್.ಆರ್ ೫೭೧ (೯೫.೨%), ಬಸವರಾಜ ೫೭೦ (೯೫%) ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಚೈತ್ರಾ ೫೮೩ (೯೭.೧೭%), ಬಿ.ಮೈದಲಿ ೫೭೯ (೯೬.೫%), ಎಚ್.ಕೆ.ಶರತ್ ೫೭೬ (೯೬%), ಅಶ್ವಿನಿ ೫೭೫ (೯೫.೮೩%), ರಾಮ್ ಸಿಂಗ್ ೫೭೫ (೯೫.೮೩%), ಎಸ್.ವೆಂಕಟ್ ನಿಖಿಲ್ ೫೭೫ (೯೫.೮೩%), ಮಹಾಲಕ್ಷ್ಮಿ ೫೭೪ (೯೫.೬೭%), ಲಕ್ಷ್ಯ ನಾಹರ ೫೭೩ (೯೫.೫%), ಮಲ್ಲಿಕಾ ೫೭೩ (೯೫.೫%) ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.