ಸಿಂಧನೂರು: ಇದು ಸರ್ಕಾರಿ ಹಣ್ಣಿನ ತೋಟವೋ ಇಲ್ಲ ಬೀಳೋ: ಸಾರ್ವಜನಿಕರ ಪ್ರಶ್ನೆ

Spread the love

ನಮ್ಮ ಸಿಂಧನೂರು, ಮಾರ್ಚ್ 28
ನಗರದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಇಲಾಖೆಯ ಸರ್ಕಾರಿ ಹಣ್ಣಿನ ತೋಟವನ್ನು ಇದು ಹಣ್ಣಿನ ತೋಟವೋ ಇಲ್ಲವೇ ಬೀಳು ಪ್ರದೇಶವೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಹಣ್ಣಿನ ತೋಟವಾಗಿರುವ ಇಲ್ಲಿ ಒಣಗಿದ ಗಿಡಗಳು, ಜಾಲಿಮರಗಳು, ಎಲ್ಲೆಂದರಲ್ಲಿ ಎಸೆದ ತ್ಯಾಜ್ಯ ಮಾತ್ರ ಕಾಣಸಿಗುತ್ತದೆ. ಪ್ರಭಾವಿಗಳು ಹಾಗೂ ಅನಧಿಕೃತ ವ್ಯಕ್ತಿಗಳು ಸರ್ಕಾರಿ ಜಾಗವನ್ನು ಅತಿಕ್ರಮಿಸುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Namma Sindhanuru Click For Breaking & Local News

ತಾಲೂಕು ಪಂಚಾಯಿತಿ ಹಿಂಭಾಗದಲ್ಲಿರುವ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಗೆ ಹೊಂದಿಕೊಂಡು, ಗಂಗಾವತಿ ರಸ್ತೆಯ ಆಕ್ಸಿಸ್ ಬ್ಯಾಂಕ್ ಸಮೀಪದವರೆಗೆ ಸರ್ಕಾರಿ ಹಣ್ಣಿನ ತೋಟ ವಿಶಾಲ ಪ್ರದೇಶವನ್ನು ಹೊಂದಿದೆ. ಆದರೆ ಸೂಕ್ತ ಪೋಷಣೆ ಇಲ್ಲದೇ ಅಕ್ಷರಶಃ ಅಧ್ವಾನ ಸ್ಥಿತಿಗೆ ತಲುಪಿದ್ದು, ಒಳಗೆ ಕಾಲಿಟ್ಟರೆ ಒಣಗಿದ ಹಣ್ಣಿನ ಗಿಡಗಳು, ಜಾಲಿ ಪೊದೆ, ತ್ಯಾಜ್ಯ ವಸ್ತುಗಳು ಕಂಡುಬರುತ್ತವೆ. ಸಿಟಿಯ ಮಧ್ಯಭಾಗದಲ್ಲಿ ಸರ್ಕಾರದ ಅತ್ಯಮೂಲ್ಯ ಜಾಗವಿದ್ದರೂ ಇದನ್ನು ಪರಿಸರ ಸ್ನೇಹಿಗೊಳಿಸುವಲ್ಲಿ ಮುಂದಾಗಬೇಕಾದ ಸಂಬAಧಿಸಿದ ಇಲಾಖೆ ಮತ್ತು ಅದರ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಪರಿಣಾಮವೇ ದಿನದಿಂದ ದಿನಕ್ಕೆ ಹಳ್ಳ ಹಿಡಿಯುತ್ತಿದೆ ಎಂದು ಪರಿಸರ ಪ್ರಿಯರು ಆರೋಪಿಸುತ್ತಾರೆ.
ಅನೈತಿಕ ಚಟುವಟಿಕೆ ತಾಣ
ಸರ್ಕಾರಿ ಹಣ್ಣಿನ ತೋಟಕ್ಕೆ ಕೆಲವು ಕಡೆ ಕೌಂಪಾAಡ್ ಇಲ್ಲದ ಕಾರಣ ಎಲ್ಲೆಂದರಲ್ಲಿ ತ್ಯಾಜ್ಯವನ್ನು ತಂದು ಬಿಸಾಕಲಾಗುತ್ತಿದ್ದು, ಮತ್ತೊಂದೆಡೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಹಣ್ಣಿನ ತೋಟದ ಒಳಗಡೆ ಪ್ರವೇಶಿಸುತ್ತಿದ್ದಂತೆ ಎಲ್ಲೆಂದರಲ್ಲಿ ಬಿದ್ದಿರುವ ನಿರೋಧ್‌ಗಳೇ ಇದಕ್ಕೆ ಸಾಕ್ಷಿಯಾಗಿವೆ. ಹಾಡಹಗಲೇ ಇಲ್ಲಿ ಇಸ್ಪೀಟ್, ಜೂಜಾಟ ಹಾಗೂ ಕಾನೂನು ಬಾಹಿರ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತವೆ ಎಂದು ಸಾರ್ವಜನಿಕರು ದೂರುತ್ತಾರೆ.

Namma Sindhanuru Click For Breaking & Local News

ಅತಿಕ್ರಮಕ್ಕೂ ಮುನ್ನ ಎಚ್ಚೆತ್ತುಕೊಳ್ಳಲಿ
ಸಿಂಧನೂರು ಪ್ರಮುಖ ವಾಣಿಜ್ಯ ನಗರಿಯಾಗಿದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸವಾಲಿನ ಕೆಲಸವಾಗಿದ್ದು, ಇದಕ್ಕೆ ಜಾಗದ ಕೊರತೆಯೂ ಕಾಡುತ್ತಿದೆ. ಹಾಗಾಗಿ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಹಣ್ಣಿನ ತೋಟದ ಜಾಗವನ್ನು ರಕ್ಷಿಸುವ ಮೂಲಕ ಸಾರ್ವಜನಿಕ ಬಳಕೆಗೆ ಮಾತ್ರ ಉಪಯೋಗಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.


Spread the love

Leave a Reply

Your email address will not be published. Required fields are marked *