ನಮ್ಮ ಸಿಂಧನೂರು, ಮಾರ್ಚ್ 28
ಕಡುಭ್ರಷ್ಟ, ವಂಶಪಾರಂಪರ್ಯ ಹಾಗೂ ಜನವಿರೋಧಿ ಆಡಳಿತವನ್ನು ಮುಂದುವರಿಸಿರುವ ಜನತಾದಳ (ಎಸ್), ಕಾಂಗ್ರೆಸ್ ಹಾಗೂ ಬಿಜೆಪಿ (ಜೆಸಿಬಿ) ಪಾರ್ಟಿಗಳಿಗೆ 2024ರ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಮೂಲಕ, ಸ್ವಚ್ಛ, ಪ್ರಾಮಾಣಿಕ, ನಿಷ್ಠಾವಂತ, ದಕ್ಷ ಆಡಳಿತಗಾರರನ್ನು ಆಯ್ಕೆ ಮಾಡಿ ಜನರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಪ್ಪಳ ಲೋಕಸಭಾ ಕ್ಷೇತ್ರ ಅಭ್ಯರ್ಥಿ ನಿರುಪಾದಿ ಗೋಮರ್ಸಿಯವರು ಸಿಂಧನೂರು ತಾಲೂಕಿನ ಹಳ್ಳಿ ಹಳ್ಳಿಯ ಮತದಾರರನ್ನು ಭೇಟಿಯಾಗುತ್ತಿದ್ದಾರೆ. ದುಡಿಮೆಗೆ ಹೋದ ಕೂಲಿಕಾರರು, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು ಸೇರಿದಂತೆ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾದ ದುಡಿಯುವ ಜನರನ್ನು ಭೇಟಿ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಜನರು ಹಾಗೂ ರೈತರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಜನವಿರೋಧಿ ರಾಜಕಾರಣ ಹೇಗೆ ಕಾರಣವಾಗಿದೆ ಎಂಬ ಬಗೆಯನ್ನು ತಮ್ಮದೇ ದಾಟಿಯಲ್ಲಿ ವಿವರಿಸುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಅವರೊಂದಿಗೆ ಕೆಆರ್ಎಸ್ ಪಾರ್ಟಿಯ ಜಿಲ್ಲಾ ಮುಖಂಡರು, ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ.