ಸ್ವಾಭಿಮಾನಿ ಸಮಾವೇಶದಲ್ಲಿ ಹೈಕಮಾಂಡ್ ಮೇಲೆ ಗುಡುಗಿದ ಸಂಗಣ್ಣ ಕರಡಿ, ನಾಲ್ಕು ದಿನ ಗಡುವು

Spread the love

ನಮ್ಮ ಸಿಂಧನೂರು, ಮಾರ್ಚ್ 21
ಕೊಪ್ಪಳದಲ್ಲಿ ಗುರುವಾರ ಅಭಿಮಾನಿಗಳು, ಹಿತೈಷಿಗಳು ಹಾಗೂ ಬೆಂಬಲಿಗರು ‘ಸ್ವಾಭಿಮಾನಿ ಕರಡಿ ಸಂಗಣ್ಣ ಅಭಿಮಾನಿಗಳ ಬಳಗ’ದ ವತಿಯಿಂದ ಕರೆದಿದ್ದ ಸಭೆಯಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಪರೋಕ್ಷವಾಗಿ ಹೈಕಮಾಂಡ್ ಮೇಲೆ ಗುಡುಗಿದ್ದಾರೆ.
“ನಾನು ಮೋದಿ ಅಭಿಮಾನಿ, ಸಣ್ಣ ರೈತ ಕುಟುಂಬದಿಂದ ರಾಜಕೀಯಕ್ಕೆ ಬಂದು ಈ ಮಟ್ಟಕ್ಕೆ ತಲುಪಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಪಕ್ಷವನ್ನೂ ಸಂಘಟಿಸಿದ್ದೇನೆ. ಆದರೆ ಮಾಜಿ ಸಂಸದರೊಬ್ಬರು ಹೇಳ್ತಾರೆ ಕರಡಿ ಸಂಗಣ್ಣನವರದು ಏನ್ ಕೊಡುಗೆ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಎಂದು. ನನ್ನ ಪ್ರೊಗ್ರೆಸ್ ವರದಿಯನ್ನ ಮಾಜಿ ಸಂಸದರು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಮತ್ತೆ ಅವರು ಇನ್ನೊಂದು ಮಾತು ಹೇಳಿದ್ದಾರೆ ಸಂಘಟನೆಯಲ್ಲಿ ಕರಡಿ ಸಂಗಣ್ಣನವರದು ಏನೂ ಪಾತ್ರ ಇಲ್ಲ ಅಂತಾ. ಎಕ್ಸ್ ಎಂಪಿಯವರು ನಮ್ಮ ಪಾರ್ಟಿಗೆ ಬಂದಾಗ ಪಕ್ಷದವರು ನನಗೆ ಕರೆ ಮಾಡ್ಲಿಲ್ಲ, ಅವರೂ ಸಹ ಕರೆ ಮಾಡಿಲ್ಲ. ಕಳೆದ ವಿಧಾನಸಭೆಯಲ್ಲಿ ಕೆ.ಕರಿಯಪ್ಪ ಅವರಿಗೆ ಟಿಕೆಟ್ ಸಿಗುತ್ತೆ, ಪಾರ್ಟಿಯವರಿಂದ ಕರೆ ಇಲ್ಲ, ಅಭ್ಯರ್ಥಿಯವರಿಂದಲೂ ಕರೆ ಇಲ್ಲ, ಪಕ್ಷದಲ್ಲಿದ್ದೀವಿ ಇದನ್ನೆಲ್ಲಾ ನುಂಗಿಕೊಳ್ಳಬೇಕಾಗುತ್ತೆ. ಪ್ರತಾಪ್ ಪಾಟೀಲ್ರು ಪದಗ್ರಹಣ ಕಾರ್ಯಕ್ರಮಕ್ಕೆ ಕರೆ ಮಾಡ್ತಾರೆ ಅಲ್ಲಿಗೆ ಹೋಗಿ ಬರ್ತೀನಿ , ಯಲಬುರ್ಗಾದಿಂದಲೂ ಕರೆ ಬರುತ್ತೆ ಅಲ್ಲಿಗೂ ಹೋಗಿ ಬರ‍್ತೀನಿ, ಸಿಂಧನೂರಿನಲ್ಲಿ ಪದಗ್ರಹಣಕ್ಕೆ ಯಾರೂ ಕರೆ ಮಾಡ್ಲಿಲ್ಲ. ಮತ್ತೆ ಹೇಳ್ತಾರೆ ಕರಡಿ ಸಂಗಣ್ಣ ಸಂಘಟನೆಗೆ ಬರ‍್ತಾನೇನು, ಏನಾದ್ರೂ ಲಾಭ ಇದ್ರ ಬರ‍್ತಾನೆ ಅಂತಾ ಮಾತಾಡ್ತಾರೆ. ಪಾರ್ಟಿ ಮುಖಂಡರೇ ಹೀಗೆ ಮಾತಾಡಿದ್ರೆ, ಅವರ ಜೊತೆ ಹೇಗೆ ಕೈಜೋಡಿಸಬೇಕು ಅನ್ನೋದು ಅರ್ಥ ಆಗ್ತಾಯಿಲ್ಲ’’ ಎಂದು ಪರೋಕ್ಷವಾಗಿ ಕೆಲ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Namma Sindhanuru Click For Breaking & Local News

‘ಬಿಟ್ರೋದ್ರೆ ಏನು ನಮ್ಮ ಪಕ್ಷಕ್ಕೇನು ಹಾನಿಯಾಗಲ್ಲ ಅಂತೆ’
“ನಮ್ಮ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಕರಡಿ ಸಂಗಣ್ಣನವರು ಪಕ್ಷ ಬಿಟ್ರೋದ್ರೆ ನಮಗೇನು ಹಾನಿಯಾಗಲ್ಲ. ನಮ್ಮ ನಿರ್ಣಯನೇ ಆಗಿಲ್ಲ, ಪಾರ್ಟಿಯಲ್ಲಿ ಇರಬೇಕೋ, ಅಥವಾ ಹೊರಗ ಹೋಗಬೇಕೋ ಇಲ್ಲ ಇಂಡಿಪೆಂಡೆಂಟ್ ನಿಲ್ಲಬೇಕೋ, ಸ್ಥಗಿತರಾಗಬೇಕೋ ನಿರ್ಣಯವೇ ಆಗಿಲ್ಲ ಅಷ್ಟರಲ್ಲೇ ನಮ್ಮ ನಾಯಕರು ಈ ತರ ಮಾತಾಡ್ತಾರೆ. ಈ ರೀತಿ ನನಗೆ ಅಗೌರವ ಮಾಡ್ತಾಯಿದ್ದಾರೆ. ಮಾಜಿ ಸಂಸದರ ಸ್ಟೇಟ್‌ಮೆಂಟೇ ನನಗೆ ಆಶೀರ್ವಚನ, ಅದು ಬಲವನ್ನು ತುಂಬುತ್ತದೆ ಎಂದು ಭಾವಿಸುತ್ತೇನೆʼʼ ಎಂದು ಬೆಂಬಲಿಗರ ಸಭೆಯಲ್ಲಿ ಸಂಗಣ್ಣ ಕರಡಿ ಹೇಳಿದರು.

Namma Sindhanuru Click For Breaking & Local News

‘ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ನಾನು’
“ತಾಲೂಕು ಬೋರ್ಡ್ ಮೆಂಬರಿಂದ ಪಾರ್ಲಿಮೆಂಟ್ ಮೆಂಬರ್‌ವರೆಗೂ ನನ್ನನ್ನು ಜನರು ಆಶೀರ್ವದಿಸಿರುವುದಕ್ಕೆ ಈ ಸಂದರ್ಭದಲ್ಲಿ ನಾನು ನಮನಗಳನ್ನು ಸಲ್ಲಿಸುತ್ತೇನೆ. ಶಾಸಕನಾಗಿ, ಸಂಸದನಾಗಿ ಆಯ್ಕೆಗೊಂಡು ಅಭಿವೃದ್ಧಿ ಕೆಲಸ ಮಾಡಲು ಜನರ ಆಶೀರ್ವಾದವೇ ಕಾರಣ, ನನ್ನನ್ನು ಪಕ್ಷ ಕಡೆಗಿಣಿಸಿದ್ದನ್ನು ಗಮನಿಸಿ ಕೊಪ್ಪಳ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರದ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಆಗಮಿಸಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ’’ ಎಂದು ಭಾವುಕವಾಗಿ ನುಡಿದರು.

Namma Sindhanuru Click For Breaking & Local News

‘ಯಡಿಯೂರಪ್ಪ ಅವರಿಂದ ಫೋನ್ ಕಾಲ್ ಬಂದಿದೆ’
“ಪಕ್ಷದ ಬಹಳಷ್ಟು ಹಿರಿಯ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಬುಧವಾರ ಬೆಳಿಗ್ಗೆ 8.30 ಗಂಟೆಗೆ ಯಡಿಯೂರಪ್ಪ ಸಾಹೇಬರು ಫೋನ್ ಮಾಡಿ, ಏ ಸಂಗಣ್ಣ ಸಭೆ-ಗಿಬೆ ಮಾಡ್ಬೇಡ. ಏನ್ ಸರಿ ಮಾಡೋಣ ಅನ್ನುವ ಮಾತನ್ನು ಅಂದಿದ್ದಾರೆ. ಮೈಸೂರಿನ ರಾಮದಾಸ್ ಅವರು ಫೋನ್ ಮಾಡಿ ವಿಷಯ ಗಮನಿಸಿದ್ದೀನಿ, ದುಡುಕಿನ ನಿರ್ಣಯ ತಗೋಬೇಡಿ, ನನಗೆ ಮೋದಿಯವರೊಂದಿಗೆ ನೇರ ಸಂಪರ್ಕ ಇದ್ದು, ಈ ಬಗ್ಗೆ ಮಾತಾಡ್ತೀನಿ ಎಂದು ಸಾಂತ್ವನಾ ಹೇಳಿದ್ದಾರೆ. ಮಾಜಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರು ಈ ಬಗ್ಗೆ ವರಿಷ್ಠರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ವಿ.ಸುನಿಲ್ ಕುಮಾರ್, ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ, ಪ್ರತಿ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನಿಮ್ಮ ಬಗ್ಗೆ ವರಿಷ್ಠರ ಮುಂದೆ ಪ್ರಸ್ತಾಪಿಸಿದ್ದೇವೆ ಎಂದಿದ್ದಾರೆ. ಅಲ್ಲದೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಖುದ್ದಾಗಿ ಮಾತನಾಡಿ, ಅಮಿತ್ ಶಾ‌ ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ’’ ಎಂದು ಅಭಿಮಾನಿಗಳಿಗೆ ವಿವರಿಸಿದರು.


Spread the love

Leave a Reply

Your email address will not be published. Required fields are marked *