ನಮ್ಮ ಸಿಂಧನೂರು, ಜುಲೈ 21
ತಾಲೂಕಿನ ಹೊಸಳ್ಳಿಕ್ಯಾಂಪ್.ಇ.ಜೆಯಿಂದ ಭಾನುವಾರ ನಾಪತ್ತೆಯಾಗಿದ್ದ ಬಾಲಕ ಪರಶುರಾಮ ತಂದೆ ಹುಸೇನಪ್ಪ (12) ಸೋಮವಾರ ಮಧ್ಯಾಹ್ನ ಪತ್ತೆಯಾಗಿದ್ದಾನೆ ಎಂದು ಪಾಲಕರು ತಿಳಿಸಿದ್ದಾರೆ. ಕ್ಯಾಂಪ್‌ನ ರಾಮದೇವರ ಗುಡಿಯ ಬಳಿ ಭಾನುವಾರ ಸಂಜೆ 6 ಗಂಟೆಯವರೆಗೂ ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿದ್ದನು. ಬಹಳಷ್ಟು ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ತದನಂತರ ಪಾಲಕರು ಪೊಲೀಸರಿಗೂ ಮಾಹಿತಿ ನೀಡಿದ್ದರು. ಹೇಗೋ ಏನೋ ಕ್ಯಾಂಪಿನ ಹುಲ್ಲಿನ ಬಣವೆಯೊಂದರಲ್ಲಿ ಮಲಗಿದ್ದ ಬಾಲಕನನ್ನು ಗ್ರಾಮಸ್ಥರೊಬ್ಬರು ಗಮನಿಸಿದ್ದಾರೆ. ತದನಂತರ ಪಾಲಕರ ಗಮನಕ್ಕೆ ತಂದಿದ್ದಾರೆ. ನಿನ್ನೆ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೂ ಬಿಡುವಿಲ್ಲದ ಹುಡುಕಾಡಿದ ಪಾಲಕರು ನೆಮ್ಮದಿಯ ನಿಟ್ಟಿಸಿರುಬಿಟ್ಟಿದ್ದಾರೆ.