ಸಿಂಧನೂರು: ನಗರಸಭೆಯಲ್ಲಿ ಕೆಲಸ ನಿರ್ವಹಿಸುವ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ೩ರಿಂದ ೫ತಿಂಗಳ ಬಾಕಿ ವೇತನ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘ (ಎಐಸಿಸಿಟಿಯು)ದಿಂದ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ನಗರಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ೨೫ಕ್ಕೂ ಹೆಚ್ಚು ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಸೇವೆಯಲ್ಲಿ ತೊಡಗಿದ್ದು, ನಗರದ ಎಲ್ಲ ವಾರ್ಡ್ಗಳ ಸ್ವಚ್ಛತೆಯಲ್ಲಿ ಮಹತ್ವಪೂರ್ಣ ಕೆಲಸ ಮಾಡುತ್ತಿದ್ದಾರೆ. ನಗರ ಸ್ವಚ್ಛತೆ ತಮ್ಮ ಆರೋಗ್ಯವನ್ನೂ ಲೆಕ್ಕಿಸಿದೇ ಕೆಲಸ ಮಾಡಿದ ತ್ಯಾಜ್ಯ ಸಾಗಿಸುವ ವಾಹನ ಚಾಲಕರಿಗೆ ಕೆಲಸಕ್ಕೆ ತಕ್ಕಂತೆ ಕನಿಷ್ಠ ಕೂಲಿಯಾಗಲಿ, ಕಾನೂನಾತ್ಮಕವಾಗಿ ಕನಿಷ್ಠ ಸೌಕರ್ಯಗಳಾಗಲೀ ದೊರೆಯುತ್ತಿಲ್ಲ.
ವಾರದ ರಜೆ ಇಲ್ಲದೇ ದಿನವೂ ತ್ಯಾಜ್ಯ, ದುರ್ನಾತ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವ ತ್ಯಾಜ್ಯ ಸಾಗಿಸುವ ವಾಹನ ಚಾಲಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡದೇ, ಬಾಕಿ ಉಳಿಸಿಕೊಳ್ಳುವ ಮೂಲಕ ನಗರಸಭೆ ಮತ್ತು ಸರ್ಕಾರ, ವಾಹನ ಚಾಲಕರಿಗೆ ಕಿರುಕುಳ ನೀಡುತ್ತಿರುವುದು ಕಾನೂನು ಬಾಹಿರವಾಗಿದೆ. ಚಾಲಕರ ಮಾಸಿಕ ಆದಾಯವನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಆಗದಂತಹ ಪರಿಸ್ಥಿತಿಗೆ ತಲುಪಿವೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಚಾಲಕರ ನಾಗರಾಜ್ ಪೂಜಾರ್, ತ್ಯಾಜ್ಯ ಸಾಗಿಸುವ ವಾಹನ ಚಾಲಕರಲ್ಲಿ ಕೆಲವರಿಗೆ ೩ ತಿಂಗಳ ಇನ್ನೂ ಕೆಲವರಿಗೆ ೫ ತಿಂಗಳ ವೇತನ ಬಾಕಿ ಇದ್ದು, ಕಳೆದ ೧೫ ದಿನಗಳಿಂದ ಮನವಿ ಮಾಡುತ್ತಾ ಬಂದರೂ ನಿರ್ಲಕ್ಷö್ಯವಹಿಸಿರುವುದು ಸರಿಯಲ್ಲ. ಹಾಗಾಗಿ ಕೂಡಲೇ ತ್ಯಾಜ್ಯ ಸಾಗಿಸುವ ವಾಹನ ಚಾಲಕರಿಗೆ ಬಾಕಿ ವೇತನ ಪಾವತಿ ಮಾಡಬೇಕು, ಮುಂದಿನ ತಿಂಗಳಿAದ ಯಾವುದೇ ರೀತಿ ವಿಳಂಬವಾಗದಂತೆ ಪ್ರತಿ ತಿಂಗಳು ೭ನೇ ತಾರೀಖಿನ ಒಳಗಡೆ ವೇತನ ಪಾವತಿ ಮಾಡಬೇಕು ಹಾಗೂ ಹೊಸ ಟೆಂಡರ್ ಶೀಘ್ರ ಕರೆದು, ಕನಿಷ್ಠ ವೇತನ ಕಾಯ್ದೆ ಅನ್ವಯ ವೇತನ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಒಂದು ವೇಳೆ ವೇತನ ಪಾವತಿ ಮಾಡದೇ ಹೋದಲ್ಲಿ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಚ್ಚರಿಸಿದರು.
೩ ರಿಂದ ೫ ತಿಂಗಳವರೆಗೆ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿ ಮಾಡಬೇಕು, ಪ್ರತಿ ತಿಂಗಳು ೭ನೇ ತಾರೀಖಿನ ಒಳಗಡೆ ವೇತನ ನೀಡಬೇಕು, ಈ ಹಿಂದಿನ ಟೆಂಡರ್ ಅವಧಿ ಮುಗಿದಿದ್ದು, ಶೀಘ್ರ ಹೊಸ ಟೆಂಡರ್ ಕರೆದು ವಿಳಂಬ ಮಾಡದೇ ಅಗತ್ಯ ಕ್ರಮ ಕೈಗೊಳ್ಳಬೇಕು, ತ್ಯಾಜ್ಯ ಸಾಗಿಸುವ ವಾಹನ ಚಾಲಕರಿಗೆ ಇಎಸ್‌ಐ ಹಾಗೂ ಪಿಎಫ್ ಹಣ ಜಮಾ ಮಾಡಬೇಕು, ಕನಿಷ್ಠ ವೇತನ ಕಾಯ್ದೆಯ ಅನ್ವಯ ಗುತ್ತಿಗೆದಾರ ಕಂಪನಿಯಿAದ ೨೮ ಲಕ್ಷ ರೂಪಾಯಿ ವ್ಯತ್ಯಾಸದ ಹಣ ಬರಬೇಕಿದ್ದು, ನಗರಸಭೆ ಮತ್ತು ಸರ್ಕಾರ ಈ ಹಣವನ್ನು ಕಂಪನಿಯವರಿAದ ವಸೂಲಿ ಮಾಡಿ ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕರು ಇದ್ದರು.